ಬೆಂಗಳೂರು: ಭಾರತೀಯ ಸೇನೆ ಆಪರೇಷನ್ ಸಿಂದೂರ ನಡೆಸಿದ ಬೆನ್ನಲ್ಲೇ ಶಾಂತಿ ಪ್ರಬಲ ಅಸ್ತ್ರ ಎಂದು ಎಕ್ಸ್ ಪೋಸ್ಟ್ ಮಾಡಿ ಡಿಲೀಟ್ ಮಾಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಸಾಮಾಜಿಕ ತಾಣದಲ್ಲಿ ಮತ್ತೊಂದು ಎಡವಟ್ಟು ಮಾಡಿದೆ.
ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸುವ ನಕ್ಷೆಯನ್ನು ಕರ್ನಾಟಕ ಕಾಂಗ್ರೆಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಆಕ್ರೋಶದ ಬೆನ್ನಲ್ಲೇ ಡಿಲೀಟ್ ಮಾಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ(IMF) ಸಾಲವನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಲಾಗಿತ್ತು.
ಮೇ 9 ರಂದು IMF, ವಿಸ್ತೃತ ನಿಧಿ ಸೌಲಭ್ಯದ ಅಡಿಯಲ್ಲಿ ಪಾಕಿಸ್ತಾನಕ್ಕೆ ಸುಮಾರು 1 ಬಿಲಿಯನ್ USD ಮೊತ್ತವನ್ನು ತತ್ ಕ್ಷಣ ವಿತರಿಸಲು ಅನುಮೋದನೆ ನೀಡಿತ್ತು. ಸಣ್ಣ ತಪ್ಪು ಸಂಭವಿಸಿದೆ ಡಿಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಳಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಪದೇ ಪದೇ ನಡೆಯುತ್ತಿರುವ ಅಸಂಬದ್ಧತೆಯ ಬಗ್ಗೆ ಕೇಳಿದಾಗ, ಒಂದು ಸಣ್ಣ ತಪ್ಪು ಸಂಭವಿಸಿದೆ.
ನಾವು ಎಲ್ಲವನ್ನೂ ತೆಗೆದುಹಾಕಿದ್ದೇವೆ…ಯಾರೋ ಕಿಡಿಗೇಡಿತನ ಮಾಡಿದ್ದಾರೆ. ಪೋಸ್ಟ್‌ಗಳಿಗೆ ಕಾರಣರಾದ ಜನರನ್ನು ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಆದರೆ ಕರ್ನಾಟಕ ಕಾಂಗ್ರೆಸ್ ಮಾತ್ರ, ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು ಎಂದು ಪದೇ ಪದೇ ತನ್ನ ಮನಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸುತ್ತಿದೆ.
ಪಾಕಿಸ್ತಾನದ ಮೇಲಿನ ಅತೀವ ವ್ಯಾಮೋಹದಿಂದ ಕಾಂಗ್ರೆಸ್ ನಾಯಕರು ಪಾಕಿಸ್ತಾನ ನಮ್ಮ ಶತ್ರು ದೇಶವಲ್ಲ ಎಂದು ಹೇಳಿರುವುದು ಕಾಂಗ್ರೆಸ್‌ನ ಈ ನಡೆಯಿಂದ ಋುಜುವಾತಾಗಿದೆ” ಎಂದು ಬಿಜೆಪಿ ಕರ್ನಾಟಕ ಎಕ್ಸ್‌ನಲ್ಪಿ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದೆ.