ಚಿತ್ರದುರ್ಗ : ಹೊಳಲ್ಕೆರೆ ತಾಲ್ಲೂಕು ತಾಳ್ಯ ಹೋಬಳಿಯ ಕೊಳಾಳು ಕದುರೆ ದೇವರಹಟ್ಟಿಯಲ್ಲಿ ನೆಲೆಸಿರುವ ಕಾಟಲಿಂಗೇಶ್ವರಸ್ವಾಮಿ ಹಾಗೂ ಕದುರೆ ನರಸಿಂಹಸ್ವಾಮಿಯ ದೊಡ್ಡದೇವರ ಜಾತ್ರಾ ಮಹೋತ್ಸವ ಮಾ.14 ರಿಂದ 18 ರವರೆಗೆ ಐದು ದಿನಗಳ ಕಾಲ ನಡೆಯಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು.
16 ರಂದು ಸಂಜೆ 7-30 ಕ್ಕೆ ನಡೆಯುವ ಪ್ರತಿಭಾ ಪುರಸ್ಕಾರದ ಅಧ್ಯಕ್ಷತೆಯನ್ನು ಅನಫ್ ಎಜುಕೇಷನ್ ಅಂಡ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎನ್.ಕಿರಣ್ಕುಮಾರ್ ಯಾದವ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಇಂದಿರಾ ಕಿರಣ್, ಮಾಜಿ ಸದಸ್ಯ ಡಿ.ಕೆ.ಶಿವಮೂರ್ತಿ, ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಡಿ.ಎನ್.ಗೋವಿಂದಪ್ಪ
ಹೊಳಲ್ಕೆರೆ ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಎನ್.ರಾಮಪ್ಪ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ರುಕ್ಮಿಣಿ ಗಿರಿಯಪ್ಪ, ಹಿರಿಯೂರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಬಿ.ಕೆ.ಉಗ್ರಮೂರ್ತಿ, ಚೌಡಗೊಂಡನಹಳ್ಳಿ ಮಾಜಿ ಪ್ರಧಾನ ಪಿ.ಸಿ.ಮಹಲಿಂಗಪ್ಪ, ತೇಕಲವಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಮಂಜುನಾಥ್, ಪೂಜಾರಿ ಉಗ್ರಪ್ಪ
ಸಾಹುಕಾರ್ ಚಿತ್ತಯ್ಯ, ಗಣೇಪೂಜಾರಿ ಮದ್ದಪ್ಪ, ಗೌಡ್ರು ದಾಸಪ್ಪ, ಪೂಜಾರಿ ಈರಪ್ಪ, ಗೌಡಣ್ಣ, ಪೂಜಾರಿ ಚಿತ್ತಯ್ಯ ಇನ್ನು ಅನೇಕರು ಪಾಲ್ಗೊಳ್ಳುವರು.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಕಮಿಟಿಯವರು ವಿನಂತಿಸಿದ್ದಾರೆ.