ಚಿತ್ರದುರ್ಗ: ನಗರದಲ್ಲಿರುವಂತಹ ರುದ್ರಭೂಮಿಗಳನ್ನ ಒತ್ತುವರಿ ಮಾಡದಂತೆ ಅವುಗಳನ್ನು ಸಂರಕ್ಷಿಸಿ ಮುಂದಿನ ಜನಾಂಗದ ಅಂತ್ಯಸಂಸ್ಕಾರಕ್ಕೆ ನೀಡುವುದು ಕ್ಷೇತ್ರದ ಜನ ಪ್ರತಿನಿಧಿಯ ಮೊದಲ ಕೆಲಸವೆಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ನಗರದಲ್ಲಿನ ಕನಕ ವೃತ್ತದ ಬಳಿಯ ರುದ್ರಭೂಮಿ, ಹೆಡ್ ಪೋಸ್ಟ್ ಆಫೀಸ್ ಬಳಿ ಇರುವ ಕ್ರಿಶ್ಚಿಯನ್ ರುದ್ರಭೂಮಿ, ಯಂಗಮ್ಮನ ಕಟ್ಟೆ, ಜೋಗಿಮಟ್ಟಿಯ ರುದ್ರುಭೂಮಿಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಗಮನಿಸಿ ಮಾತನಾಡಿದರು, ಚಿತ್ರದುರ್ಗ ನಗರದ ಒಳಭಾಗದಲ್ಲಿರುವಂತಹ ರುದ್ರ ಭೂಮಿಗೆ ಮೀಸಲು ಇಟ್ಟಿರುವ ಜಾಗವನ್ನು ಯಾರು ಒತ್ತುವರಿ ಮಾಡದಂತೆ ಕ್ರಮವಹಿಸಬೇಕೆಂದು ನಗರಸಭೆ ಪೌರಯುಕ್ತರಿಗೆ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಮತ್ತು ನಗರ ಪ್ರದೇಶದಲ್ಲಿ ಶವ ಸಂಸ್ಕಾರವನ್ನು ಮಾಡುವುದಕ್ಕೆ ಕಡ್ಡಾಯವಾಗಿ ರುದ್ರ ಭೂಮಿ ಇರಲೇಬೇಕು ಎನ್ನುವ ಸರ್ಕಾರದ ಆದೇಶದ ಪ್ರಕಾರ ರುದ್ರಭೂಮಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕೂಡ ಅಷ್ಟೇ ಜವಾಬ್ದಾರಿತ ಕೆಲಸ ಹಾಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜವಾಬ್ದಾರಿತವಾಗಿ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ತಿಳಿಸಿದರು.
ಹಿಂದಿನ ಕಾಲದಲ್ಲಿ ತಪಸ್ವಿಗಳು, ಋಷಿಮುನಿಗಳು ತಪಸ್ಸು ಮಾಡುವಂತಹ ಜಾಗವೇ ರುದ್ರಭೂಮಿ ಇಂತಹ ಪವಿತ್ರ ಭೂಮಿಗಳನ್ನ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ರುದ್ರಭೂಮಿಯ ಸುತ್ತಮುತ್ತ ಕಾಂಪೌಂಡ್ಗಳನ್ನು ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ದೇವಸ್ಥಾನ ನಿರ್ಮಾಣ, ಸುಸರ್ಜಿತ ಕಟ್ಟಡ, ಹೈ ಮಸ್ಕ್ ಲೈಟ್ ಹಾಗೂ ರುದ್ರ ಭೂಮಿ ನೋಡಿಕೊಳ್ಳಲು ಒಬ್ಬ ಕಾವಲುಗಾರರನ್ನ ನೇಮಕ ಮಾಡಿಕೊಡಬೇಕೆಂದು ಶಾಸಕರಿಗೆ ಮನವಿಯನ್ನ ಸಾರ್ವಜನಿಕರು ನೀಡಿದರು ಸ್ಥಳದಲ್ಲೇ ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ತಿಳಿಸಿ ಅಭಿವೃದ್ಧಿ ಕಾರ್ಯಗಳಿಗೆ ಅತಿ ಶೀಘ್ರದಲ್ಲೇ ಭೂಮಿ ಪೂಜೆಗೆ ಸಿದ್ಧತೆಯನ್ನ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸ್ಮಶಾನಗಳಲ್ಲಿ ಹಂದಿಗೂಡುಗಳನ್ನ ಕಟ್ಟಿಕೊಂಡು ಇರುವಂತವರ ಮೇಲೆ ಕ್ರಮವನ್ನು ಜರುಗಿಸಿ ಹಾಗೂ ರುದ್ರ ಭೂಮಿಯಲ್ಲಿ ಸಾರ್ವಜನಿಕರು ಮಧ್ಯ ಸೇವನೆ ಮಾಡದಂತೆ ನಗರಸಭೆ ಅಧಿಕಾರಿಗಳು ತಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರು ರೇಣುಕಾ, ಮಾಜಿ ನಗರಸಭೆ ಅಧ್ಯಕ್ಷ ಕಾಂತರಾಜ್, ನಗರಸಭೆ ಸದಸ್ಯ ಅಂಜಿನಪ್ಪ, ಕಾಂಗ್ರೆಸ್ ಮುಖಂಡರಾದ ರಾಜೇಶ್ ಮದುರೆ, ಕೃಷ್ಣಮೂರ್ತಿ, ನಾಗರಾಜ್, ವಿಜಯಕುಮಾರ್, ತಿಪ್ಪೇಸ್ವಾಮಿ, ಮಂಜುನಾಥ್, ಕುಮಾರ್, ನಾಗೇಂದ್ರ, ತಿಮ್ಮರಾಜ್, ದಿನೇಶ್, ಗೋವಿಂದಪ್ಪ ಹಾಗೂ ಇತರರು ಇದ್ದರು.