ಕಲಬುರಗಿ : ನಿನ್ನೆ KEA ಪರೀಕ್ಷೆಯಲ್ಲಿ FDA ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆದಿತ್ತು.ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದಾಗ ಮೂವರು ಸಿಕ್ಕಿಬಿದ್ದಿದ್ದರು.
ಅಭ್ಯರ್ಥಿಗಳಾದ ಬಾಬು ಚಾಂದ್ ಶೇಕ್, ಸಂತೋಷ, ಆಕಾಶ್ ಹಾಗೂ ಅಭ್ಯರ್ಥಿಗಳಿಗೆ ಸಹಾಯ ಮಾಡಿದ್ದ ಆರ್.ಡಿ ಪಾಟೀಲ್ ಸೇರಿ ಒಟ್ಟು 5 ಜನರ ಮೇಲೆ ಇದೀಗ FIR ದಾಖಲಾಗಿದೆ.
FDA ಪರೀಕ್ಷೆಯಲ್ಲಿ ಬ್ಲೂಟ್ಯೂತ್ ಬಳಸಿ ಪರೀಕ್ಷೆ ಬರೆದಿರುವ ಅಕ್ರಮ ಪ್ರಕರಣ ಸಂಬಂಧ ಒಂಬತ್ತು ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ.ಕಲ್ಬುರ್ಗಿ ಜಿಲ್ಲೆಯ ಆಫ್ಜಲ್ ಪುರ ಠಾಣೆಯಲ್ಲಿ 5 ಜನರ ವಿರುದ್ಧ FIR ದಾಖಲಾಗಿದ್ದು, ಈ ಪ್ರಕರಣದಲ್ಲೂ ಪಿಎಸ್ಐ ಅಕ್ರಮದ ಕಿಂಗ್ ಪಿನ್ ಆರ್ ಡಿ ಪಾಟೀಲ್ ಎ1 ಆರೋಪಿ ಆಗಿದ್ದಾನೆ.
ಈಗಾಗಲೇ PSI ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿರುವ RD ಪಾಟೀಲ್ ಜೈಲಿನಿಂದ ಹೊರ ಬಂದರು ತನ್ನ ಹಳೆಯ ಚಾಳಿಯನ್ನು ಬಿಡದೆ ಮತ್ತೆ ಇದೀಗ FDA ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಸಹಾಯ ಮಾಡಿದ್ದಾನೆ ಎಂದು ಆರೋಪ ಕೇಳಿಬಂದಿದೆ.