ಗೋವಾ: ನಟಿ ಕೀರ್ತಿ ಸುರೇಶ್ ಆಂಟನಿ ಥಟ್ಟಿಲ್ ಅವರನ್ನು ವಿವಾಹವಾಗಿದ್ದಾರೆ. ದುಬೈ ಮೂಲದ ಉದ್ಯಮಿ ಆಂಟನಿ ಜೊತೆ ಹಿಂದೂ ಸಂಪ್ರದಾಯದಂತೆ ಕೀರ್ತಿ ಸುರೇಶ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಈ ಮದುವೆ ಸಮಾರಂಭ ಗೋವಾದಲ್ಲಿ ನಡೆದಿದೆ. ಗೋವಾದಲ್ಲಿ ಗುರುವಾರ (ಡಿಸೆಂಬರ್ 12) ನಡೆದ ವಿವಾಹ ಸಮಾರಂಭದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು.
ಕೀರ್ತಿ ಸುರೇಶ್ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಅಲ್ಲದೇ ಕ್ರಿಶ್ಚಿಯನ್ ರೀತಿಯಲ್ಲಿಯೂ ಮದುವೆ ನಡೆಯಲಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಸದ್ಯ ಕೀರ್ತಿ ಸುರೇಶ್ ಅವರ ಮದುವೆಯ ಫೋಟೋಗಳು ವೈರಲ್ ಆಗಿವೆ. ಇವುಗಳನ್ನು ನೋಡಿದ ಹಲವು ಸಿನಿಮಾ ತಾರೆಯರು, ಅಭಿಮಾನಿಗಳು, ನೆಟಿಜನ್‌ಗಳು ನವ ಜೋಡಿಗೆ ಶುಭ ಕೋರುತ್ತಿದ್ದಾರೆ.