‘ಘನತೆ, ಗೌರವ ಮಹಿಳೆಯರಷ್ಟೇ ಅಲ್ಲ, ಪುರುಷರಿಗೂ ಇದೆ’- ಕೇರಳ ಹೈಕೋರ್ಟ್

WhatsApp
Telegram
Facebook
Twitter
LinkedIn

ಕೊಚ್ಚಿ : 2007ರಲ್ಲಿ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಹಿರಿಯ ನಟ, ನಿರ್ದೇಶಕ ಬಾಲಚಂದ್ರ ಮೆನನ್ ಅವರಿಗೆ ಕೇರಳ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಜೊತೆಗೆ ಮಹಿಳೆಯರಷ್ಟೇ ಅಲ್ಲ, ಪುರುಷರಿಗೂ ಗೌರವ ಮತ್ತು ಘನತೆ ಇದೆ ಎಂದು ತಿಳಿಸಿದೆ.

ತಮಗೆ ಕಿರುಕುಳ ನೀಡಲಾಗಿದೆ ಎಂದು 17 ವರ್ಷಗಳ ಬಳಿಕ ನಟಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದರಲ್ಲಿ ನನ್ನ ಗೌರವ ಮತ್ತು ಘನತೆ ಹಾಳುಮಾಡುವ ಉದ್ದೇಶವಿದೆಯೇ ಹೊರತು ಬೇರೇನೂ ಅಲ್ಲ ಎಂದು ಬಾಲಚಂದ್ರ ಮೆನನ್ ವಾದಿಸಿದ್ದರು. ಮೆನನ್ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಪಿ.ವಿ. ಕುನ್ನಿಕೃಷ್ಣನ್ ಅವರು ಜಾಮೀನು ಮಂಜೂರು ಮಾಡಿದ್ದಾರೆ.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಪೀಠ, ಆರೋಪಿ ಮೆನನ್ ಅವರ ವಾದದಲ್ಲಿ ಹುರುಳಿದೆ. 17 ವರ್ಷಗಳ ಬಳಿಕ ದೂರು ನೀಡಲಾಗಿದೆ. ಆರೋಪಿಯು ಖ್ಯಾತ ಸಿನಿಮಾ ನಟ. ೪೦ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಹೇಳಿದೆ.

ಸಂತ್ರಸ್ತ ನಟಿಯ ಹೇಳಿಕೆಯನ್ನು ಆಧರಿಸಿ ನೋಡುವುದಾದರೆ, 17 ವರ್ಷಗಳ ಬಳಿಕ ಪ್ರಕರಣ ದಾಖಲಿಸಲಾಗಿದೆ. ತನಿಖೆ ಪ್ರಗತಿಯಲ್ಲಿರುವುದು ಸತ್ಯ. ಗೌರವ ಮತ್ತು ಘನತೆ ಕೇವಲ ಮಹಿಳೆಯರಿಗೆ ಸೀಮಿತವಲ್ಲ ಎಂಬುದನ್ನು ಪ್ರತಿಯೊಬ್ಬರೂ ಗಮನದಲ್ಲಿಟ್ಟುಕೊಳ್ಳಬೇಕಿದೆ. ಪುರುಷರಿಗೂ ಗೌರವ ಮತ್ತು ಘನತೆ ಇದೆ. ನ್ಯಾಯದ ದೃಷ್ಟಿಯಿಂದ ಈ ಪ್ರಕರಣದಲ್ಲಿ ಜಾಮೀನು ನೀಡಬಹುದು’ ಎಂದು ನ್ಯಾ. ಪಿ.ವಿ. ಕುನ್ನಿಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ, ನಿರ್ದೇಶಕ ಮೆನನ್ ಅವರು ಎರಡು ವಾರಗಳಲ್ಲಿ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗಬೇಕು. ವಿಚಾರಣೆ ನಂತರ ತನಿಖಾಧಿಕಾರಿಯು ಮೆನನ್ ಅವರನ್ನು ಬಂಧಿಸಲು ಬಯಸಿದರೆ, ೫೦,೦೦೦ರೂ. ಬಾಂಡ್ ಮತ್ತು ಇಬ್ಬರ ಶೂರಿಟಿ ಪಡೆದು ಬಿಡುಗಡೆ ಮಾಡಬೇಕು ಎಂದು ನ್ಯಾಯಪೀಠ ಆದೇಶಿಸಿದೆ.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon