ಪುತ್ತೂರು : ಪುತ್ತೂರು ಗ್ರಾಮಾಂತರ, ವಿಟ್ಲ, ಕಡಬ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಸರಗೋಡಿನ ಸೂರಜ್ ಕೆ(36) ಬಂಧಿತ ಕಳ್ಳ. ಡಿಸೆಂಬರ್ 20 ರಂದು ಭಕ್ತಕೋಡಿ ಎಂಬಲ್ಲಿ ಮನೆಯ ಹಿಂಬಾಗಿಲು ಮುರಿದು ಆರೋಪಿ ಸೂರಜ್ ಚಿನ್ನಾಭರಣಗಳನ್ನು ಕದ್ದಿದ್ದ. ಇದೇ ರೀತಿಯ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬೆಳಕಿಗೆ ಬಂದಿತ್ತು.
ಕಳ್ಳನ ಜಾಡು ಹಿಡಿದು ಹೊರಟ ಪೊಲೀಸರು ಕಾರು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆತ ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದು ಬಯಲಾಗಿದೆ. ಪುತ್ತೂರು ಗ್ರಾಮಾಂತರ ಠಾಣಾ ಸರಹದ್ದಿನ ಸರ್ವೆ ಗ್ರಾಮದ ಭಕ್ತಕೋಡಿ, ಕಡಬ ಠಾಣಾ ವ್ಯಾಪ್ತಿಯ ಆಲಂಗಾರು ಗ್ರಾಮದ ಕಲ್ಲೇರಿ, ಬಂಟ್ವಾಳ ಗ್ರಾಮಾಂತರ ವ್ಯಾಪ್ತಿಯ ಇರಾ, ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಕುಂಟು ಕುಡೇಲು, ಮಂಕುಡೆ, ಕಾಡುಮಠ, ಇಡ್ಕಿದು ಗ್ರಾಮದ ಅಳಕೆ ಮಜಲು ಎಂಬಲ್ಲಿ ಆರೋಪಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬುದಾಗಿ ತಿಳಿದುಬಂದಿದೆ.
ಆರೋಪಿಯಿಂದ 18,00000 ಮೌಲ್ಯದ 200 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ 3,00,000 ರೂ. ಮೌಲ್ಯದ ಕಾರು ಸೇರಿ ಒಟ್ಟು 21,00,000 ರೂ.ನ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.