ಐಪಿಎಲ್ 18 ಆವೃತ್ತಿಗೆ ಆರ್‌ಸಿಬಿ ತಂಡದ ನೂತನ ನಾಯಕನಾಗಿ ಆಯ್ಕೆಯಾದ ರಜತ್ ಪಾಟೀದಾರ್ ಗೆ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಶುಭಾಷಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಲೈವ್ ಮೂಲಕ ಬೆಂಗಳೂರು ತಂಡದ ನೂತನ ನಾಯಕ ರಜತ್ ಪಾಟೀದಾರ್ ಗೆ ವಿರಾಟ್ ಅಭಿನಂದಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ಈಗಾಗಲೇ ಬೆಂಗಳೂರು ತಂಡಕ್ಕಾಗಿ ಅನೇಕ ಪಂದ್ಯಗಳಲ್ಲಿ ಜೊತೆಯಾಗಿ ಆಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ರಜತ್ ಗೆ ಅಭಿನಂದನೆ ತಿಳಿಸಿದ್ದಾರೆ.
