ಮುಂಬೈ: ಮಹಾಕುಂಭಮೇಳದಲ್ಲಿ ಎಲ್ಲರ ಕಣ್ಣು ಮನಸೆಳೆದ ಮೊನಾಲಿಸಾ ಎಲ್ಲರಿಗೂ ತಿಳಿದ ವಿಚಾರ. ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆದ ಮೊನಾಲಿಸಾಗೆ ಸಿನಿಮಾಗಳಿಂದಲೂ ಆಫರ್ ಬಂತು.
ಆದರೆ ಅವರ ಸಿನಿಮಾಗೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ. ಮೊನಾಲಿಸಾ ನಟಿಸಬೇಕಿರುವ ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ಸಿನಿಮಾಗೆ ತೊಂದರೆ ಆಗುತ್ತಿದೆ ಎಂದು ನಿರ್ದೇಶಕರು ಆರೋಪಿಸಿದ್ದಾರೆ. ಹಾಗಾಗಿ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸಿನಿಮಾ ಬಗ್ಗೆ ಅಪಪ್ರಚಾರ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮೊನಾಲಿಸಾ ನಟಿಸಬೇಕಿರುವ ಸಿನಿಮಾಗೆ ಸನೋಜ್ ಮಿಶ್ರಾ ಅವರು ನಿರ್ದೇಶನ ಮಾಡಲಿದ್ದಾರೆ. ಅವರ ಮೇಲೆ ಕೆಲವು ಯೂಟ್ಯೂಬರ್ ಗಳು ಇಲ್ಲಸಲ್ಲದ ವಿಡಿಯೋ ಮಾಡಿದ್ದಾರೆ. ಈ ನಿರ್ದೇಶಕ ಮಾಡಿದ ಯಾವ ಸಿನಿಮಾ ಕೂಡ ಈತನಕ ರಿಲೀಸ್ ಆಗಿಲ್ಲ. ಇಂಥವರ ಜೊತೆ 16 ವರ್ಷ ವಯಸ್ಸಿನ ಮೊನಾಲಿಸಾ ಸಿನಿಮಾ ಮಾಡಿದರೆ ಆಕೆಯ ಭವಿಷ್ಯ ಹಾಳಾಗಿ ಹೋಗುತ್ತದೆ ಎಂದು ಆರೋಪ ಮಾಡಿದ್ದಾರೆ.
ಯೂಟ್ಯೂಬ್ ಮೂಲಕ ತಮ್ಮ ಸಿನಿಮಾ ಬಗ್ಗೆ ಈ ರೀತಿ ಅಪಪ್ರಚಾರ ಮಾಡಿದವರ ವಿರುದ್ಧ ಸನೋಜ್ ಮಿಶ್ರಾ ಅವರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಮುಂಬೈನಲ್ಲಿ ಅವರು ದೂರು ನೀಡಿದ್ದಾರೆ.