ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿನ ಜಾಲಿಕಟ್ಟೆ ಗ್ರಾಮ ಬಳಿ ಭಾನುವಾರ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮರವರ ಪ್ರತಿಮೆಯನ್ನು ಆನಾವರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿರಶೈವ ಲಿಂಗಾಯತ ಯುವ ವೇದಿಕೆಯ ನಗರಾಧ್ಯಕ್ಷ, ಕರ್ನಾಟಕ ರಾಜ್ಯ ಭ್ರಷ್ಠಾಚಾರ ಮುಕ್ತ ಹೋರಾಟ ಸಮಿತಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಜ್ ಜಾಲಿಕಟ್ಟೆ ಚಿತ್ರದುರ್ಗ ನಗರದ ಎಸ್.ಬಿ.ಎಂ.ವೃತ್ತಕ್ಕೆ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಎಂದು ನಾಮಕರಣ ಮಾಡಲಾಗಿದೆ ಆದರೆ ಅಲ್ಲಿ ಪ್ರತಿಮೆಯನ್ನು ಸ್ಥಾಪನೆ ಮಾಡಲು ಜಾಗದ ಸಮಸ್ಯೆ ಇದೆ ಈ ಹಿನ್ನಲೆಯಲ್ಲಿ ಹೊಳಲ್ಕರೆ ರಸ್ತೆಯ ಜಾಲಿಕಟ್ಟೆ ಗ್ರಾಮದ ಬಳಿ ಸುಮಾರು 3 ಅಡಿ ಎತ್ತರದ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಯನ್ನು ನಿರ್ಮಾಣ ಮಾಡಿ ಅದನ್ನು ಉದ್ಘಾಟನೆಯನ್ನು ಮಾಡಲಾಗಿದೆ ಮುಂದಿನ ದಿನದಲ್ಲಿ ಸುಮಾರು 10 ಅಡಿ ಎತ್ತರದ ಕಂಚಿನ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಯನ್ನು ಮುಂದಿನ 2 ವರ್ಷದಲ್ಲಿ ನಿರ್ಮಾಣ ಮಾಡಲಾಗುವುದೆಂದು ತಿಳಿಸಿದರು.
ಕಿತ್ತೂರು ರಾಣಿ ಚನ್ನಮ್ಮ ರವರ ಜೀವಿತಾವಧಿಯಲ್ಲಿ ಮಾಡಿದ ಆಡಳಿತದ ಕಾರ್ಯ ವೈಖರಿ, ಸಾಧನೆ, ಹೋರಾಟಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಲಾಗವುದು ಕಿತ್ತೂರು ರಾಣೀ ಚನ್ನಮ್ಮ ಜೀವನ ಚರಿತೆಯನ್ನು ತಿಳಿಸುವ ಪುಸ್ತಕವನ್ನು ಹೊರ ತರುವುದರ ಮೂಲಕ ಅದನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುವುದು ಎಂದು ತಿಳಿಸಿದರು.
ಭಾನುವಾರ ಜಾಲಿಕಟ್ಟೆ ಬಳಿಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಕಿತ್ತೂರು ರಾಣಿ ಚನ್ನಮ್ಮರವರ ಪ್ರತಿಮೆಯನ್ನು ಆನಾವರಣಕ್ಕೂ ಮುನ್ನಾ ಹಾಲಿನ ಅಭೀಷೇಕವನ್ನು ಮಾಡಿ ಪೂಜೆಯನ್ನು ಸಲ್ಲಿಸಲಾಯಿತು, ತದ ನಂತರ ಸಿಹಿಯನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಚಿತ್ರದುರ್ಗ ಜಿಲ್ಲಾಧ್ಯಕ್ಷ ಮಂಜುನಾಥ್ (ದಾಳಿಂಭೆ) ಜಾಲಿಕಟ್ಟೆ ಗ್ರಾಮಸ್ಥರಾದ ವಿರೇಶ್, ನಾಗರಾಜ್, ಗಿರೀಶ್, ರಮೇಶ್, ಸಂತೋಷ, ಮನೋಜ್, ವಿರೂಪಾಕ್ಷ ಜಾಲಿಕಟ್ಟೆ, ಅಭೀಷೇಕ್, ಆಶೋಕ್, ಚೇತನ, ಮಧು,ಶಿವು, ಸುರೇಶ್, ಹೋನ್ನಪ್ಪ, ಚಂದ್ರಪ್ಪ, ಸತೀಶ್, ರವಿ, ಶಮಂತ್, ರಘು, ರಮೇಶ್ ಸಿದ್ದು ಸೇರಿದಂತೆ ಇತರರು ಭಾಗವಹಿಸಿದ್ದರು.