ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ KMF ನಂದಿನಿ ಹಾಲಿನ ಟೀ ಮತ್ತು ನಂದಿನಿ ಉತ್ಪನ್ನಗಳು ಸಿಗಲಿದೆ. KMF ಮತ್ತು ಚಾಯ್ ಪಾಯಿಂಟ್ ಒಪ್ಪಂದ ಮಾಡಿಕೊಂಡಿದೆ ಈ ಕುರಿತು KMF ಅಧಿಕೃತವಾಗಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಟೀ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಚಾಯ್ ಪಾಯಿಂಟ್, ಈ ಚಾಯ್ ಪಾಯಿಂಟ್ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾಕುಂಭ ಮೇಳದಲ್ಲಿ 10ಕ್ಕೂ ಹೆಚ್ಚು ಮಳಿಗೆಗಳನ್ನ ಹಾಕಲಿದೆ ಆ ಮಳೆಗಳಲ್ಲಿ ನಂದಿನಿ ಹಾಲಿನ ಜೊತೆ ನಂದಿನಿ ಉತ್ಪನ್ನಗಳು ಸಹ ಮಾರಾಟಕ್ಕೆ ಇಡಲಾಗುತ್ತದ್ದೆ. ಈ ಮಹಾಕುಂಭ ಮೇಳದಲ್ಲಿ ಚಾಯ್ ಪಾಯಿಂಟ್ ಒಂದು ಕೋಟಿಗೂ ಕಪ್ಗಳಿಗಿಂತಲೂ ಹೆಚ್ಚು ಚಹಾ ತಯಾರಿಸಿ ಗಿನ್ನಿಸ್ ದಾಖಲೆ ಮಾಡುವ ತವಕದಲ್ಲಿದೆ. ಈ ಮಹಾ ಕುಂಭಮೇಳದಲ್ಲಿ ಚಾಯ್ ಪಾಯಿಂಟ್ ತಯಾರಿಸುವ ಟೀ ಗೆ ನಮ್ಮ KMF ನಂದಿನಿ ಹಾಲು ಬಳಕೆಯಾಗಲಿದೆ.
ಚಾಯ್ ಪಾಯಿಂಟ್ ಮಳಿಗೆಯಲ್ಲಿ KMF ನಂದಿನ ಉತ್ಪನ್ನಗಳಾದ ಸಿಹಿ ತಿನಿಸುಗಳು ಮತ್ತು ಮಿಲ್ಕ್ ಶೇಕ್‌ಗಳು ಸಹ ಮಾರಾಟಕ್ಕಿಡಲಾಗುತ್ತದೆ. ಚಾಯ್ ಪಾಯಿಂಟ್ ಜೊತೆ KMF ನಂದಿನಿ ಒಪ್ಪಂದ ಕುರಿತು KMF ಎಂಡಿ ಬಿ ಶಿವಸ್ವಾಮಿ ಹರ್ಷ ವ್ಯಕ್ತಿಪಡಿಸಿದ್ದಾರೆ. ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳದಲ್ಲಿ ಚಾಯ್ ಪಾಯಿಂಟ್ ಮಳಿಗೆಗಳಲ್ಲಿ ನಂದಿನ ಉತ್ಪನ್ನಗಳು ಸಿಗಲಿದೆ, ಉತ್ತರ ಪ್ರದೇಶದಲ್ಲಿ ನಂದಿನಿ ಉತ್ಪನ್ನಗಳನ್ನ ಪ್ರದರ್ಶಿಸಿ ನಮ್ಮ ಬ್ರ್ಯಾಂಡ್ ಬಲಪಡಿಸಲು ಇದೊಂದು ಸುವರ್ಣ ಅವಕಾಶ, ಈ ಐತಿಹಾಸಿಕ ಮೇಳದಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆಯೊಂದಿಗೆ ಮಹಾ ಕುಂಭ ಮೇಳದ ಯಶಸ್ಸನ್ನ ನೀರಿಕ್ಷಿಸಿದ್ದೇವೆ ಎಂದಿದ್ದಾರೆ.