ಮಳೆಗಾಲ, ಬೇಸಿಗೆ ಎಲ್ಲ ಕಾಲದಲ್ಲೂ ಸೊಳ್ಳೆ ಕಾಟ ಎಲ್ಲರಿಗೂ ತಲೆನೋವು. ಮನೆಯೊಳಗೆ ಸೊಳ್ಳೆ ನಿಯಂತ್ರಿಸಲು ಹೆಚ್ಚಿನವರು ಸೊಳ್ಳೆ ಕಾಯಿಲ್ ಬಳಸುತ್ತಾರೆ. ಆದರೆ ಈ ಕಾಯಿಲ್ ನಿಂದ ಉಂಟಾಗುವ ಹೊಗೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆರೋಗ್ಯದ ಮೇಲೆ ಪರಿಣಾಮ:
ಸೊಳ್ಳೆ ಕಾಯಿಲ್ ಬಳಸದಂತೆ ತಜ್ಞರು ಎಚ್ಚರಿಸುತ್ತಿರುವ ಪ್ರಮುಖ ಕಾರಣವೆಂದರೆ, ಇದರಲ್ಲಿ ಬಳಸುವ ರಾಸಾಯನಿಕಗಳು ಹಾನಿಕಾರಕ. ಈ ಕಾಯಿಲ್ ಉರಿದಾಗ ಹೊರಸೂಸುವ ಹೊಗೆ, ಸಿಗರೇಟ್ ಹೊಗೆಗಿಂತಲೂ ಅಪಾಯಕಾರಿ ಎಂದು ಸಂಶೋಧನೆಗಳು ಸೂಚಿಸುತ್ತವೆ. ಇದು ಶ್ವಾಸಕೋಶದ ಸೋಂಕು, ಅಸ್ತಮಾ, ತಲೆನೋವು, ಅಲರ್ಜಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಮಕ್ಕಳ ಆರೋಗ್ಯಕ್ಕೆ ತೀವ್ರ ಅಪಾಯ:
ಮಕ್ಕಳಿಗೆ ಈ ಹೊಗೆ ಹೆಚ್ಚು ಪರಿಣಾಮ ಬೀರುತ್ತದೆ. ಶ್ವಾಸಕೋಶದ ಸಮಸ್ಯೆಗಳಾದ ಅಸ್ತಮಾ, ಉಸಿರಾಟದ ತೊಂದರೆ, ತಲೆನೋವು ಹೆಚ್ಚಾಗುವ ಸಾಧ್ಯತೆಯಿದೆ. ಜೊತೆಗೆ, ಚರ್ಮದ ಅಲರ್ಜಿ, ಕಣ್ಣೀರಿನ ಸಮಸ್ಯೆ, ತೂಕಡಿಸು, ನಿದ್ರಾಹೀನತೆ ಉಂಟಾಗಬಹುದು.
ಆರೋಗ್ಯ ತಜ್ಞರ ಪ್ರಕಾರ, ಸೊಳ್ಳೆ ತೊಡೆದುಹಾಕಲು ನೈಸರ್ಗಿಕ ವಿಧಾನಗಳು ಉತ್ತಮ
ಸೊಳ್ಳೆ ಪರದೆ ಬಳಸಿ
ನೀರು ನಿಲ್ಲದಂತೆ ನೋಡಿಕೊಳ್ಳಿ
ಸೊಳ್ಳೆ ನಿಯಂತ್ರಣಕ್ಕೆ ಮಚ್ಚೆದೀಪ, ಲವಂಗದ ದೀಪ ಬೆಳಗುವುದು ಉತ್ತಮ