ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ (MCG) ನಲ್ಲಿ 1928ರಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯ ವಿರುದ್ಧ 332 ರನ್ ಗುರಿಯನ್ನು ಬೆನ್ನಟ್ಟಿದಾಗ ಅತ್ಯಧಿಕ ಯಶಸ್ವಿ ಟೆಸ್ಟ್ ರನ್ ಚೇಸ್ ಆಗಿತ್ತು. 1895ರಲ್ಲಿ ಇಂಗ್ಲೆಂಡ್ 297 ರನ್ ಗುರಿಯನ್ನು ಬೆನ್ನಟ್ಟುವುದರೊಂದಿಗೆ ಎರಡನೇ ಅತ್ಯಧಿಕ ಚೇಸ್ ಆಗಿತ್ತು. ಯಶಸ್ವಿಯಾಗಿ ಬೆನ್ನಟ್ಟಿದ ಮೂರನೇ ಗರಿಷ್ಠ ಗುರಿ 295 ರನ್ ಆಗಿತ್ತು. ಇದೀಗ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ನ 4ನೇ ದಿನದ ನಂತರ ಆಸ್ಟ್ರೇಲಿಯಾವು ಭಾರತದ ವಿರುದ್ಧ 333 ರನ್‌ಗಳ ಮುನ್ನಡೆ ಸಾಧಿಸಿದೆ. ಇನ್ನೂ ಒಂದು ವಿಕೆಟ್ ಕಾಯ್ದುಕೊಂಡಿರುವ ಆಸೀಸ್ ಪಡೆ ನಾಳೆಯೂ ಬ್ಯಾಟಿಂಗ್ ಮಾಡಲಿದೆ. ಆನಂತರ ಬರುವ ಸ್ಕೋರ್ ಅನ್ನು ಭಾರತ ಚೇಸ್ ಮಾಡಿದರೆ ದಾಖಲೆ ನಿರ್ಮಾಣವಾಗಲಿದೆ.
