ಬೆಂಗಳೂರು : ಕೊಡವ ಸಮುದಾಯದಿಂದ ಇಂಡಸ್ಟ್ರಿಗೆ ನಾನೇ ಮೊದಲು ಬಂದಿದ್ದು ಎಂದು ಹೇಳುವ ಮೂಲಕ ಕಿರಿಕ್ ಬೆಡಗಿ, ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
ಸಂದರ್ಶನ ಒಂದರಲ್ಲಿ ಮಾತನಾಡಿದ ನಟಿ ರಶ್ಮಿಕಾ ಮಂದಣ್ಣ ಕೊಡವ ಸಮುದಾಯ ನನ್ನನ್ನೇ ಗುರುತಿಸಿದೆ, ಕೊಡವ ಸಮುದಾಯದಿಂದ ಇಂಡಸ್ಟ್ರಿಗೆ ಯಾರೂ ಬಂದಿಲ್ಲ, ನಾನೇ ಮೊದಲು ಬಂದಿದ್ದು ಎಂದು ಹೇಳಿದ್ದಾರೆ.
ನಟಿ ಪ್ರೇಮಾ, ನಿಧಿ ಸುಬ್ಬಯ್ಯ, ಶುಭ್ರ ಅಯ್ಯಪ್ಪ, ಹರ್ಷಿಕಾ ಪೂಣಚ್ಚ, ಸೇರಿದಂತೆ ಹಲವರು ಕೊಡವ ಸಮುದಾಯದಿಂದ ಬಂದ ಸ್ಟಾರ್ ನಟಿಯಾಗಿದ್ದಾರೆ. ಆದರೆ ಇದೆನ್ನೆಲ್ಲಾ ಮರೆತು ರಶ್ಮಿಕಾ ಮಂದಣ್ಣ ಹೇಳಿಕೆ ನೀಡಿದ್ದು ಟೀಕೆಗೆ ಗುರಿಯಾಗಿದ್ದಾರೆ.