ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಅಪಘಾತ ರಹಿತ ಸೇವೆ ಸಲ್ಲಿಸುವ ಚಾಲಕರಿಗೆ ಗುಡ್ ನ್ಯೂಸ್ ನೀಡಿದೆ. ಪ್ರೋತ್ಸಾಹ ಧನ ಹೆಚ್ಚಳ ಮಾಡಿದೆ.
ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ ಎಂಡಿ ಅಕ್ರಂ ಪಾಷಾ ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಮೊದಲು ಮುಖ್ಯಮಂತ್ರಿ ಚಿನ್ನದ ಪದಕ ಪಡೆದ ಚಾಲಕರಿಗೆ 5000 ರೂ ನಗದು ಪುರಸ್ಕಾರವಿತ್ತು. ಈ ನಗದು ಮೊತ್ತವನ್ನು ಈಗ 10,000 ರೂ ಗೆ ಹೆಚ್ಚಳ ಮಾಡಲಾಗಿದೆ. ಇದರ ಜೊತೆಗೆ ಚಿನ್ನದ ಪದಕ ಪಡೆದ ಚಾಲಕರಿಗೆ ಮಾಸಿಕ ಭತ್ಯೆ 500ರೂ-ನಿಂದ1000 ರೂಗೆ ಏರಿಕೆ ಮಾಡಲಾಗಿದೆ.
ಬೆಳ್ಳಿ ಪದಕ ಪಡೆದ ಚಾಲಕರಿಗೆ ನೀಡಲಾಗುತ್ತಿದ್ದ 2500 ರೂ ನಗದು ಪುರಸ್ಕಾರವನ್ನು 5000 ರೂಗೆ ಹೆಚ್ಚಳ ಮಾಡಲಾಗಿದೆ. ಜೊತೆಗೆ ಮಾಸಿಕ ಭತ್ಯೆ 250ರಿಂದ 500 ರೂಗೆ ಹೆಚ್ಚಿಸಲಾಗಿದೆ. ಪರಿಷ್ಕೃತ ನಗದು ಪುಅರಸ್ಕಾರ 2026ರ ಜನವರಿ ೧ರಿಂದ ಜಾರಿಗಲಿದೆ.






























