ಚಿತ್ರದುರ್ಗ:ಮೈಸೂರಿನ ಕರ್ನಾಟಕ ರಾಜ್ಯ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರದುರ್ಗ ಮೂಲದ ಡಾ.ಸ್ವಾತಿ ತೇಜ್ ರವರು ಭೌತಶಾಸ್ತ್ರದಲ್ಲಿ ಪಿ.ಹೆಚ್.ಡಿ ಪದವಿ ಪಡೆದಿದ್ದಾರೆ.
ಡಾ.ಸೂತಪ ಮುಖರ್ಜಿ ಮಾರ್ಗದರ್ಶನದಲ್ಲಿ “Network Motifs in Gen Regulation: Equilibrium Behavior and Noice Characteristics” ಎಂಬ ವಿಷಯದ ಮೇಲೆ ಸ್ವಾತಿ ತೇಜ್ ಪ್ರಬಂಧ ಮಂಡಿಸಿದ್ದರು. ಈ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದ್ದು, ಜ.18 ಜರುಗಿದ 105ನೇ ಘಟಿಕೋತ್ಸವದಲ್ಲಿ ಕುಲಾದಿಪತಿ ಲೋಕನಾಥ ಪಿ.ಹೆಚ್.ಡಿ ಪದವಿ ಪ್ರಧಾನ ಮಾಡಿದರು.