ಬೆಂಗಳೂರು: ಹೌದು ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಗಾಗಿ ಅರ್ಜಿ ಸಲ್ಲಿಸಲು ಸರ್ಕಾರ ಕೊನೆಯ ದಿನಾಂಕ ಪ್ರಕಟಿಸಿದೆ.
ಈ ಯೋಜನೆಯಡಿ ಈಗಾಗಲೇ ಕೋಟಿಗೂ ಹೆಚ್ಚು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿವೆ. ಇನ್ನೂ ಹೆಚ್ಚಿನ ಅರ್ಜಿ ಗ್ರಾಮೀಣ ಪ್ರದೇಶಗಳಿಂದ ಬಂದಿಲ್ಲ. ಹೀಗಾಗಿ ಈ ಪ್ರದೇಶಗಳಲ್ಲಿ ವಿದ್ಯುತ್ ಕಂಪೆನಿಗಳು ಮನೆಯತ್ತ ತೆರಳಿ ನೋಂದಣಿ ಮಾಡಲಿವೆ.
ಗ್ರಾಮದ ‘ಮೀಟರ್ ರೀಡರ್’ಗಳೇ ನಿತ್ಯ 250ಮನೆಗಳನ್ನು ನೋಂದಣಿ ಮಾಡಲಿದ್ದಾರೆ ಎಂದು ಬೆಸ್ಕಾಂ ಹಣಕಾಸು ವಿಭಾಗದ ನಿರ್ದೇಶಕ ಜೆ.ದರ್ಶನ್ ತಿಳಿಸಿದ್ದಾರೆ.