ಅಮೆರಿಕ :ಲಾಂಚ್ ಪ್ಯಾಡ್ ಸಮಸ್ಯೆಯಿಂದಾಗಿ ಬುಧವಾರ ಅಂತರರಾಷ್ಟ್ರೀ ಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್ಎಕ್ಸ್ ರಾಕೆಟ್ ಉಡ್ಡಯನ ವಿಳಂಬವಾಗಿದೆ.
ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐಎಸ್ಎಸ್) ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ವಾಪಸ್ ಆಗುವುದು ವಿಳಂಬವಾಗಿದೆ.
ನಾಸಾ ಕಳುಹಿಸುತ್ತಿರುವ ಗಗನಯಾನಿಗಳು ಐಎಸ್ಎಸ್ ತಲುಪಿದ ನಂತರ, ಸುನಿತಾ ಹಾಗೂ ಬುಚ್ ಅವರು ಭೂಮಿಯತ್ತ ಪಯಣ ಆರಂಭಿಸಬೇಕಿದೆ.
ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ ಫಾಲ್ಕನ್ ರಾಕೆಟ್ ಉಡ್ಡಯನದ ನಿರ್ಣಾ ಯಕ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದೆ.