ನವದೆಹಲಿ: ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇಸ್ಲಾಮಿಕ್ ಮತಾಂಧರು ನಡೆಸಿದ ಭಯೋತ್ಪಾದಕ ದಾಳಿಯ ವಿರುದ್ಧ ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗ್ತಿದೆ. ಪಾಕಿಸ್ತಾನದ ವಿರುದ್ಧ ಭಾರೀ ಆಕ್ರೋಶ ಕೇಳಿ ಬರುತ್ತಿದೆ.
ಮತ್ತೊಂದೆಡೆ ಪಹಲ್ಗಾಮ್ ದಾಳಿಯ ನಂತರ ದೇಶಾದ್ಯಂತ ಜನರು ಪಾಕಿಸ್ತಾನ ಮತ್ತು ಅಲ್ಲಿರುವ ಭಯೋತ್ಪಾದಕರ ವಿರುದ್ಧ ತೀವ್ರ ಕೋಪಗೊಂಡಿದ್ದಾರೆ. ಇಡೀ ದೇಶವು ಸರ್ಕಾರದ ಪಾಕಿಸ್ತಾನಕ್ಕೆ ತಕ್ಕ ಪ್ರತಿಕ್ರಿಯೆ ನೀಡೋದನ್ನು ಕಾಯುತ್ತಿದೆ, ಸಾಮಾಜಿಕ ಮಾಧ್ಯಮಗಳಲ್ಲಿ ಜನರು ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಭಯೋತ್ಪಾದನೆಯನ್ನು ಅದರ ಬೇರುಗಳಿಂದಲೇ ನಿರ್ಮೂಲನೆ ಮಾಡಬೇಕೆಂದು ಬಯಸುವ ಕೆಲವು ಜನರಿದ್ದಾರೆ.
ಭಾರತದ ಅಪಾಯಕಾರಿ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೂಡ ಪಾಕಿಸ್ತಾನಕ್ಕೆ ಬೆದರಿಕೆ ಹಾಕಿದೆ. ಬಿಷ್ಣೋಯ್ ಗ್ಯಾಂಗ್ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪಾಕಿಸ್ತಾನದ ರೂಪಾಯಿ ಮೌಲ್ಯದ ವ್ಯಕ್ತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದೆ. ಆ ಭಯೋತ್ಪಾದಕನಿಗೆ 1 ಲಕ್ಷ ರೂಪಾಯಿ ಮೌಲ್ಯ ವಿಧಿಸಿ ಭಯೋತ್ಪಾದಕನ ಫೋಟೋವನ್ನು ಸಹ ಲಗತ್ತಿಸಲಾಗಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯ ನಂತರ ಈ ಭಯೋತ್ಪಾದಕನನ್ನು ಕೊಲ್ಲುವ ಮಾತನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್‌ನಲ್ಲಿ ಭಯೋತ್ಪಾದಕ ಹಫೀಜ್ ಸಯೀದ್‌ನ ಚಿತ್ರವನ್ನು ಹಾಕಲಾಗಿದೆ. ಹೀಗಾಗಿ ಹಫೀಸ್ ಸಯೀದ್‌ನನ್ನು ಕೊಲ್ಲುವದಾಗಿ ಬೆದರಿಕೆ ಹಾಕಿರುವ ಲಾರೆನ್ಸ್ ಗ್ಯಾಂಗ್, ‘ನೀವು ನಮ್ಮ ಮುಗ್ಧ ಜನರನ್ನು ಕೊಂದಿದ್ದೀರಿ, ಈಗ ನಾವು ಪಾಕಿಸ್ತಾನಕ್ಕೆ ನುಗ್ಗಿ ಒಂದು ಲಕ್ಷ ಮೌಲ್ಯದ ವ್ಯಕ್ತಿಯನ್ನು ಕೊಲ್ಲುತ್ತೇವೆ’ ಎಂದು ಓಪನ್ ಬೆದರಿಕೆ ಹಾಕಿ ಬರೆಯಲಾಗಿದೆ.