ಬಟಾಣಿ ಸಿಪ್ಪೆಯನ್ನುಎಸೆಯೋ ಮುನ್ನ ಈ ಆರೋಗ್ಯ ಲಾಭದ ಬಗ್ಗೆ ತಿಳಿಯಿರಿ

WhatsApp
Telegram
Facebook
Twitter
LinkedIn
ನವದೆಹಲಿ: ಹಸಿ ಬಟಾಣಿ ಕಾಳುಗಳು ಪ್ರತಿಯೊಬ್ಬರಿಗೂ ತಿನ್ನಲು ಇಷ್ಟವಾಗುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು  ಲಭ್ಯವಾಗುವ ತರಕಾರಿಗಳಲ್ಲಿ ಹಸಿ ಬಟಾಣಿಯು ಒಂದು. ಈ ಹಸಿ ಬಟಾಣಿ ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದು  ಮಾತ್ರವಲ್ಲದೇ  ಬಟಾಣಿ ಸೇವನೆಯಿಂದ ನಾನಾ ರೀತಿಯ ಆರೋಗ್ಯ ಲಾಭಗಳಿದೆ. ಆದರೆ  ಹೆಚ್ಚಿನ ಜನರು ಬಟಾಣಿ  ಮಾತ್ರ ಸೇವಿಸಿ ಅದರ ಸಿಪ್ಪೆಗಳನ್ನು(Green Peas Peel) ಎಸೆಯುತ್ತಾರೆ. ಆದರೆ ನೀವು  ಎಸೆಯುವ ಸಿಪ್ಪೆಯಿಂದ ವಿವಿಧ ರೀತಿಯ ಖಾದ್ಯ, ರಸಂ, ಸೂಪ್ ತಯಾರಿ‌ಸಬಹುದು. ಇದರ ಸಿಪ್ಪೆಯಲ್ಲಿ ಅನೇಕ‌ ರೀತಿಯ ಪೋಷಕಾಂಶ ಇರಲಿದ್ದು ಫೈಬರ್, ಪೊಟ್ಯಾಸಿಯಮ್, ವಿಟಮಿನ್ಸ್‌ನಂತಹ ಅಂಶಗಳು ಹೇರಳವಾಗಿದೆ. ಹಾಗಾಗಿ ಬಟಾಣಿ ಕಾಳು ಸೇವಿಸುವ ಜೊತೆಗೆ ಅದರ  ಸಿಪ್ಪೆಯನ್ನು ಬಳಕೆ ಮಾಡಿಕೊಳ್ಳಿ.
ಬಟಾಣಿ ಸಿಪ್ಪೆಯನ್ನು ಬಳಸಿಕೊಂಡು ರುಚಿಕರವಾದ  ಸೂಪ್ ತಯಾರಿಸಬಹುದು. ಅದರಲ್ಲೂ  ಹಸಿರು ಬಟಾಣಿ ಸಿಪ್ಪೆಯ ಸೂಪ್ ಬಹಳಷ್ಟು ರುಚಿ ಇರಲಿದ್ದು ಹೆಚ್ಚಿನ ಫೈಬರ್ ಅಂಶವನ್ನು ಒಳಗೊಂಡಿರುತ್ತದೆ.  ಉತ್ಕರ್ಷಣ ನಿರೋಧಕ ಶಕ್ತಿ ಇದರಲ್ಲಿ ಇರಲಿದ್ದು ಈ ಸೂಪ್ ಸೇವನೆ ಬಹಳಷ್ಟು  ಆರೋಗ್ಯಕರವಾಗಿಸುತ್ತದೆ.
ಹೀಗೆ ಸೂಪ್ ತಯಾರಿಸಿ
ಮೊದಲಿಗೆ ಹಸಿರು ಬಟಾಣಿ ಬೀಜಗಳನ್ನು ಸ್ವಚ್ಛಗೊಳಿಸಿ ಅದರ   ಸಿಪ್ಪೆಗಳನ್ನು  ಸುಮಾರು  ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.  ಬಳಿಕ ಕುಕ್ಕರ್‌ನಲ್ಲಿ, ನೆನೆಸಿದ ಸಿಪ್ಪೆ, ಹಸಿರು ಬಟಾಣಿ, ಸ್ವಲ್ಪ ಬೆಣ್ಣೆ, ಮತ್ತು ನೀರನ್ನು ಸೇರಿಸಿ ಬಟಾಣಿಯ ಸಿಪ್ಪೆ ಮೃದುವಾಗುವವರೆಗೆ ಬೇಯಿಸಿದ ಮಿಶ್ರಣಕ್ಕೆ ರುಚಿಗೆ ಬೇಕಾಗುವಷ್ಟು ಉಪ್ಪು ಮತ್ತು ಕಾಳು  ಮೆಣಸು ಸೇರಿಸಿ ಮತ್ತೆ ನಿಧಾನವಾಗಿ ಬೇಯಿಸಿ  ಮಿಕ್ಸ್ ಮಾಡಿ. ಅಂತಿಮವಾಗಿ, ಅದಕ್ಕೆ ನಿಂಬೆರಸ ಅಥವಾ ಆಮ್ಚೂರ್ ಪುಡಿಯನ್ನು ಆ್ಯಡ್ ಮಾಡಿ  ಬಿಸಿ ಬಿಸಿಯಾಗಿ ಸೂಪ್ ಸವಿಯಬಹುದು.
ಉಪಯೋಗ ಏನು?
ಹಸಿರು ಬಟಾಣಿ  ಅಥವಾ ಅದರ ಸಿಪ್ಪೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪೊಟ್ಯಾ ಸಿಯಮ್  ಅಂಶ ಹೊಂದಿರಲಿದ್ದು ರಕ್ತದೊತ್ತಡವನ್ನುನಿಯಂತ್ರಿಸಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಈ ಬಿಸಿ ಬಿಸಿ ಸೂಪ್ ಮಾಡಿ ಕುಡಿಯುವುದರಿಂದ ಕೆಮ್ಮು, ಜ್ವರ ಕಡಿಮೆಯಾಗಲಿದೆ.
ಬಟಾಣಿ ಸಿಪ್ಪೆಯಲ್ಲಿ ಪೊಟ್ಯಾಸಿಯಮ್, ವಿಟಮಿನ್ಸ್ ತಾಮ್ರದಂತಹ ಅಂಶಗಳು ಇರಲಿದ್ದು  ಇದು ಜೀರ್ಣಕ್ರಿಯೆ ಮತ್ತು ಕಣ್ಣಿನ ದೃಷ್ಟಿಗೆ ಬಹಳ ಒಳಿತು.
ಬಟಾಣಿ ಸಿಪ್ಪೆಯಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ವಿಟಮಿನ್ ‘ಸಿʼ ಅಂಶ ಇದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon