ಮೈಸೂರು : ಇಡೀ ಕರ್ನಾಟಕಕ್ಕೆ ಸಿದ್ದರಾಮಯ್ಯ ಅವರು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಈ ರಾಜ್ಯಕ್ಕೂ ಅವರ ಹೆಸರೆ ಇಟ್ಟು ಬಿಡಲಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಕೆಆರ್ಎಸ್ ರಸ್ತೆಗೆ ಸಿಎಂ ಹೆಸರು ಇಡುವ ವಿಚಾರವಾಗಿ ಮಾತನಾಡಿದ ಅವರು, ಮಹಾರಾಜರ ಮನೆತನಕ್ಕೆ ಸರ್ಕಾರ ಯಾಕೆ ಅಪಮಾನ ಮಾಡ್ತಿದೆ? ಸಿಎಂ ಈ ವಿಚಾರದಲ್ಲಿ ಜಾಣ ಮೌನದಲ್ಲಿದ್ದಾರೆ. ತಮ್ಮ ಬೆಂಬಲಿಗರ ಛೂ ಬಿಟ್ಟು ರಸ್ತೆಗೆ ತಮ್ಮ ಹೆಸರಿಡಿಸಿಕೊಳ್ತಿದ್ದಾರೆ. ಸಿದ್ದರಾಮಯ್ಯ ಹೆಸರನ್ನು ದೇವನೂರು ಬಡಾವಣೆಯ ಕೆಸರೆ ಗ್ರಾಮಕ್ಕೆ ಇಡಲಿ. ಇಡೀ ಕರ್ನಾಟಕಕ್ಕೆ ಸಿದ್ದರಾಮಯ್ಯ ಅವರು ಬಹಳ ದೊಡ್ಡ ಕೊಡುಗೆ ಕೊಟ್ಟಿದ್ದಾರೆ.
ಈ ರಾಜ್ಯಕ್ಕೂ ಅವರ ಹೆಸರೇ ಇಟ್ಟು ಬಿಡಲಿ. ಈ ಹೆಸರಿನ ರಾಜಕಾರಣವನ್ನು ಸಿದ್ದರಾಮಯ್ಯ ಕೈ ಬಿಡಬೇಕು.ಮೈಸೂರಿಗೆ ನನ್ನ ಅವಧಿಯಲ್ಲೂ ಬಹಳ ಕೊಡುಗೆ ಕೊಟ್ಟಿದ್ದೇನೆ. ಹಾಗಂತ ನನ್ನ ಹೆಸರಿಡಿ ಎಂದು ಕೇಳಲು ಆಗುತ್ತಾ ಎಂದು ಪ್ರಶ್ನಿಸಿದರು.