ಚಿತ್ರದುರ್ಗ : ಜಿಲ್ಲೆಯಲ್ಲಿರುವ ಸೌಹಾರ್ದ ಸಹಕಾರ ಸಂಘಗಳು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997 ಮತ್ತು ಸೌಹಾರ್ದ ಸಹಕಾರ ಸಂಘಗಳ ಬೈಲಾ ಪ್ರಕಾರ ಕಾರ್ಯನಿರ್ವಹಿಸದೇ, ಚುನಾವಣೆ ನಡೆಸದೇ, ಸುಮಾರು ವರ್ಷಗಳಿಂದ ಆಡಿಟ್ ಮಾಡಿಸದೇ ಸ್ಥಗಿತಗೊಂಡಿರುವುದರಿಂದ ಸಮಾಪನೆಗೆ ಕ್ರಮಕೈಗೊಳ್ಳಲಾಗಿದೆ.
ಸೌಹಾರ್ದ ಸಹಕಾರಿ ಸಂಘಗಳ ಸದಸ್ಯರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ, ಈ ಪ್ರಕಟಣೆಯ 15 ದಿನಗಳೊಳಗಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಬಿ.ಎಲ್.ಗೌಡ ಲೇ ಔಟ್, ಚಿತ್ರದುರ್ಗ ಅವರಿಗೆ ಸಲ್ಲಿಸಲು ತಿಳಿಸಿದೆ.
2025 ಮಾರ್ಚ್ 31ರ ಅಂತ್ಯಕ್ಕೆ ಇದ್ದಂತೆ ಸ್ಥಗಿತಗೊಂಡ 07 ಸೌಹಾರ್ದ ಸಹಕಾರ ಸಂಘಗಳ ವಿವರ ಇಂತಿದೆ. ಮೊಳಕಾಲ್ಮೂರು ತಾಲ್ಲೂಕಿನ ರಾಂಪುರದ ಗಾಯತ್ರಿ ಸ್ವಶಕ್ತಿ ಸೌಹಾರ್ದ ಸ್ವ-ಸಹಾಯ ಸಹಕಾರಿ ಹಾಗೂ ಮೊಳಕಾಲ್ಮೂರು ಟೌನ್ ಹೆಚ್.ಆರ್.ರಸ್ತೆ, ಕೃಷ್ಣಮೂರ್ತಿ ಬಿಲ್ಡಿಂಗ್, ಡಿ.ಸಿ.ಸಿ ಬ್ಯಾಂಕ್ ಮೇಲ್ಭಾಗದ ಸಂಗೂಳ್ಳಿ ರಾಯಣ್ಣ ಪತ್ತಿನ ಸೌಹಾರ್ದ ಸಹಕಾರಿ, ಹೊಸದುರ್ಗ ತಾಲ್ಲೂಕು ಎಸ್.ಜೆ.ಎಂ. ಎಕ್ಸ್‍ಟೆನ್ಷನ್ ಬಳಿಯ ಶ್ರೀ ಗೂಳಿಹಟ್ಟಿ ಡಿ ಶೇಖರ್ ಅಭಿಮಾನಿ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ಹಾಗೂ ಹೊಸದುರ್ಗ ಟೌನ್ ತಾಲ್ಲೂಕು ಪಂಚಾಯತಿ ಮಳಿಗೆ ನಂ.02 ಟಿ.ಬಿ. ಸರ್ಕಲ್ ಬಳಿಯ ಸೇವಾ ನಿರತ ನೌಕರರ ವಿವಿದೋದ್ದೇಶ ಸೌಹಾರ್ದ ಸಹಕಾರಿ, ಚಿತ್ರದುರ್ಗ ತಾಲ್ಲೂಕು ಲೋಕೋಪಯೋಗಿ ಇಲಾಖೆ ಕಛೇರಿ ಆವರಣದ ಚಿತ್ರದುರ್ಗ ಕಂಟ್ರಾಕ್ಟರ್ ಪತ್ತಿನ ಸೌಹಾರ್ದ ಸಹಕಾರಿ, ಹಿರಿಯೂರು ತಾಲ್ಲೂಕು ಹುಳಿಯಾರು ರಸ್ತೆ, ಮಾರುತಿ ಕಟ್ಟಡದಲ್ಲಿರುವ ವಾಲ್ಮೀಕಿ ಪತ್ತಿನ ಸೌಹಾರ್ದ ಸಹಕಾರಿ, ಚಳ್ಳಕೆರೆ ತಾಲ್ಲೂಕು ಶ್ರೀಹರಿ ಕಾಂಪ್ಲೇಕ್ಸ್ ಬಳಿಯ ಮಾ ಪತ್ತಿನ ಸೌಹಾರ್ದ ಸಹಕಾರಿ ಸಂಘಗಳನ್ನು ಸಮಾಪನೆಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.
(ಸಾಂದರ್ಭಿಕ ಚಿತ್ರ )
































