ಬೆಂಗಳೂರು: ಇನ್ನು ಕೆಲವೇ ತಾಸುಗಳಲ್ಲಿ 2024 ಮರೆಗೆ ಸರಿದು 2025ನೇ ವರ್ಷ ಶುರುವಾಗಲಿದೆ. ಪ್ರತಿ ವರ್ಷದಂತೆ 2025ರ ಸಾರ್ವತ್ರಿಕ ಮತ್ತು ಪರಿಮಿತ ರಜೆ ದಿನಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರ ಸರಕಾರಿ ರಜೆ ಇರುತ್ತದೆ.
ಸಾರ್ವತ್ರಿಕ ರಜಾ ದಿನಗಳ ಪಟ್ಟಿ
2025ರ ಜನವರಿ 14 ಮಂಗಳವಾರ : ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2025ರ ಜನವರಿ 26 ಭಾನುವಾರ : ಗಣರಾಜ್ಯೋತ್ಸವ
2025ರ ಫೆಬ್ರವರಿ 26 ಬುಧವಾರ – ಮಹಾಶಿವರಾತ್ರಿ
2025ರ ಮಾರ್ಚ್ 31 ಸೋಮವಾರ: ಖುತುಬ್ ಎ ರಂಜಾನ್
2025ರ ಏಪ್ರಿಲ್ 10 ಗುರುವಾರ: ಮಹಾವೀರ ಜಯಂತಿ
2025ರ ಏಪ್ರಿಲ್ 14 ಸೋಮವಾರ: ಡಾ.ಬಿ.ಆರ್ ಅಂಬೇಡ್ಕರ್ ಜಯಂತಿ
2025ರ ಏಪ್ರಿಲ್ 18 ಶುಕ್ರವಾರ: ಗುಡ್ ಫ್ರೈಡೆ
2025ರ ಏಪ್ರಿಲ್ 30 ಬುಧವಾರ: ಬಸವ ಜಯಂತಿ, ಅಕ್ಷಯ ತೃತೀಯ
2025ರ ಮೇ 01 ಗುರುವಾರ: ಕಾರ್ಮಿಕ ದಿನಾಚರಣೆ
2025ರ ಜೂನ್ 07 ಶನಿವಾರ: ಬಕ್ರೀದ್
2025ರ ಆಗಸ್ಟ್ 15 ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
2025ರ ಆಗಸ್ಟ್ 27 ಬುಧವಾರ: ಗಣೇಶ ಚತುರ್ಥಿ
2025ರ ಸೆಪ್ಟೆಂಬರ್ 05 ಶುಕ್ರವಾರ: ಈದ್ ಮಿಲಾದ್
2025ರ ಅಕ್ಟೋಬರ್ 1 ಬುಧವಾರ: ಮಹಾನವಮಿ, ಆಯುಧಪೂಜೆ, ವಿಜಯದಶಮಿ
2025ರ ಅಕ್ಟೋಬರ್ 2 ಗುರುವಾರ: ಗಾಂಧಿ ಜಯಂತಿ
2025ರ ಅಕ್ಟೋಬರ್ 7 ಮಂಗಳವಾರ: ಮಹರ್ಷಿ ವಾಲ್ಮೀಕಿ ಜಯಂತಿ
2025ರ ಅಕ್ಟೋಬರ್ 20 ಸೋಮವಾರ: ನರಕ ಚತುರ್ದಶಿ
2025ರ ಅಕ್ಟೋಬರ್ 22 ಬುಧವಾರ: ಬಲಿಪಾಡ್ಯಮಿ, ದೀಪಾವಳಿ
2025ರ ನವೆಂಬರ್ 01 ಶನಿವಾರ -ಕನ್ನಡ ರಾಜ್ಯೋತ್ಸವ
2025ರ ಡಿಸೆಂಬರ್ 25 ಗುರುವಾರ: ಕ್ರಿಸ್‌ಮಸ್