ಸಂಗೀತ ಆಲಿಸಿದರೆ ಮನಸ್ಸು ಹಗುರವಾಗುತ್ತದೆ: ಡಾ.ಕೆ.ಎಂ.ವಿರೇಶ್.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ : ಮಾನವನ ಮನಸ್ಸು ಕೆಟ್ಟಾಗ ಸಂಗೀತವನ್ನು ಆಲಿಸುವುದು, ಚಿತ್ರವನ್ನು ಬಿಡಿಸುವುದು ಮಾಡಿದಾಗ ಮನಸ್ಸು ಹಗುರವಾಗುತ್ತದೆ ಇಂತಹ ಶಕ್ತಿ ಸಂಗೀತ ಮತ್ತು ಚಿತ್ರಕಲೆಯಲ್ಲಿ ಇದೆ ಎಂದು ಶರಣ ಸಾಹಿತ್ಯ ಪರಿಷತ್ನ ರಾಜ್ಯ ಉಪಾಧ್ಯಕ್ಷರಾದ ಡಾ.ಕೆ.ಎಂ.ವಿರೇಶ್ ತಿಳಿಸಿದರು.

ಕಲಾ ಚೈತನ್ಯ ಸೇವಾ ಸಂಸ್ಥೆ, ಸಾಂಸ್ಕøತಿಕ  ಕಲಾ ಸಂಘ ಚಿತ್ರದುರ್ಗ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಪ್ರದರ್ಶನ ಹಾಗೂ ಗಾನ ಮತ್ತು ಚಿತ್ರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಲಾವಿದರನ್ನು ಗೌರವಿಸುವ ಕಾರ್ಯವನ್ನು ಮಾಡಬೇಕಿದೆ ಅವರ ಕಲೆಗೆ ಬೆಲೆಯನ್ನು ಕಟ್ಟಲಾಗದು ಆದರೆ ಅದನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಎಲ್ಲರು ಮಾಡಬೇಕಿದೆ. ಈ ಚಿತ್ರಕಲಾವಿದರಲ್ಲಿ ಹಲವಾರು ಜನ ಉನ್ನತವಾದ ಶಿಕ್ಷಣವನ್ನು ಪಡೆದವರು ಇದ್ಧಾರೆ ಅವರು ಸಹಾ ತಮ್ಮ ಬಿಡುವಿನ ವೇಳೆಯಲ್ಲಿ ಚಿತ್ರಕಲೆಯನ್ನು ಮೈಗೂಡಿಸಿಕೊಂಡು ಅದರಲ್ಲಿ ತಲ್ಲೀನರಾಗಿದ್ಧಾರೆ, ಇದರಿಂದ  ಅವರಿಗೆ ನೆಮ್ಮದಿ ಶಾಂತಿ ಸಿಗುತ್ತದೆ ಎಂದರು.

ಮಾನವನಾದವನಿಗೆ ತನ್ನ ಜೀವನದಲ್ಲಿ ಕಲಾತ್ಮಕವಾದ ಜೀವನವನ್ನು ರೂಪಿಸಿಕೊಳ್ಳದಿದ್ದರೆ ಜೀವನೇ ಇಲ್ಲ ಎನ್ನುವಮರಾಗುತ್ತದೆ. ಮಾನವರಾದ ಮೇಲೆ ತಮ್ಮ ಬದುಕಿನಲ್ಲಿ ಯಾವುದಾರೊಂದು ಕಲೆಯನ್ನು ಆಳವಡಿಸಿಕೊಳ್ಳಬೇಕಿದೆ, ಸಂಗೀತ, ನಾಟ್ಯ, ಚಿತ್ರಕಲೆ, ಭರತನಾಟ್ಯ, ಓದುವುದು, ಬರೆಯುವುದು, ಸೇರಿದಂತೆ ಇತರೆ ಹವ್ಯಾಸಗಳನ್ನು ನಮ್ಮ ಬದುಕಿನಲ್ಲಿ ಇರಬೇಕಿದೆ, ಇದ್ಧಾಗ ಮಾತ್ರ ನಮ್ಮ ಬದುಕು ಹಸನಾಗಲು ಸಾಧ್ಯವಿದೆ ಎಂದ ಅವರು, ಮುಂದಿನ ದಿನದಲ್ಲಿ ಚಿತ್ರದುರ್ಗದಲ್ಲಿ ಆಖಿಲ ಭಾರತ ಶರಣ ಪರಿಷತ್ ವತಿಯಿಂದ ಸಮ್ಮೇಳನವನ್ನು ಆಯೋಜಿಸಲಾಗುವುದು ಮುರು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಚಿತ್ರಕಲೆಯನ್ನು ಪ್ರದರ್ಶನ ಮಾಡಲು ಅವಕಾಶವನ್ನು ಕಲ್ಪಿಸಿಕೊಡಲಾಗುವುದು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ದಿನೇಶ್ ಗೌಡಗೆರೆ , ರಾಜ್ಯ ಲಲಿತಾ ಕಲಾ ಆಕಾಡೆಮಿಯ ಸದಸ್ಯರಾದ ಸಿ.ಕಣ್ಮೇಶ್ , ಕಲಾ ಚೈತನ್ಯ ಸೇವಾ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್ ಬೇದ್ರೇ ಮಾತನಾಡಿದರು.

ಕಾರ್ಯಕ್ರಮವನ್ನು ವೈದ್ಯರಾದ ಡಾ.ಬಿ.ಮಲ್ಲಿಕಾರ್ಜನ್ ಕೀರ್ತಿ, ವಾಣಿಜ್ಯೋದ್ಯಮಿಗಳಾದ ಇಕ್ಬಾಲ್ ಹುಸೇನ್, ಬಾಪೂಜಿ ಬಿಎಡ್.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಜಯಲಕ್ಷ್ಮೀ, ಗೋಪಾಲ್ರಾವ್ ಜಾಧವ್, ಸೂರ್ಯ ಪ್ರಕಾಶ್ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಚಿತ್ರಕಲಾವಿದರಾದ ಚಿತ್ರದುರ್ಗದ ನಾಗರಾಜ್ ಬೇದ್ರೇ, ನವೀನ್ ಬೇದ್ರೇ, ಅಮೂಲ್ಯ, ಜವಳಿ ಶಾಂತಕುಮಾರ್, ಮಾರುತಿ, ಪ್ರಜ್ಞಾ ಮಂಜುನಾಥ್ ಹಾಗೂ ಹಿರಿಯೂರಿನ ಸುಷ್ಮಾ ರವರ ಚಿತ್ರಕಲಾಗಳ ಪ್ರದರ್ಶನಗೊಂಡವು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆಯನ್ನು ಮಾಡಿದ ಗಣ್ಯರನ್ನು ಸನ್ಮಾನಿಸ ಲಾಯಿತು. ಗಾನ ಮತ್ತು ಚಿತ್ರ ಸಂಗಮ ಕಾರ್ಯಕ್ರಮವನ್ನು ಚಿತ್ರಕಲಾವಿದರಾದ ಎಸ್.ಸತೀಶ್ ರಾವ್ ಹಾಗೂ ಸಂಗೀತ ಶಿಕ್ಷಕರಾದ ಅಂಜನಿ ನಡೆಸಿಕೊಟ್ಟರು.

 

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon