ಚಿತ್ರದುರ್ಗ: ಅಧಿಕಾರಿಗಳ ನಿರ್ಲಕ್ಷತನದಿಂದ ಗ್ರಾಮ ಪಂಚಾಯಿತಿಯಲ್ಲಿ ಸಾರ್ವಜನಿಕ ಕೆಲಸಗಳು ನಡೆಯುತ್ತಿಲ್ಲವೆಂದು ಆರೋಪಿಸಿ ಗ್ರಾಮದ ಯುವಕರು ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಜಾನುಕೊಂಡದಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಜಾನುಕೊಂಡ ಗ್ರಾಮ ಪಂಚಾಯಿತಿಗೆ ಶುಕ್ರವಾರ ಬೀಗ ಹಾಕಿ ಗ್ರಾಮದ ಯುವಕರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ,ಸ್ಥಳಕ್ಕೆ ತಾಲೂಕ್ ಪಂಚಾಯಿತಿ ಇಓ ಆಗಮಿಸುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು.
ಜಾನಕೊಂಡ ಗ್ರಾಮ ಪಂಚಾಯಿತಿಯ ಪಿಡಿಒ, ಕಾರ್ಯದರ್ಶಿ, ಮತ್ತು ಪ್ರಥಮ ದರ್ಜೆ ಸಹಾಯಕರು ಕೆಲಸಗಳನ್ನು ಸರಿಯಾಗಿ ಮಾಡುತ್ತಿಲ್ಲ, ಒಬ್ಬರ ಮೇಲೊಬ್ಬರು ಹೇಳುತ್ತಾ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರಗಳನ್ನು ವಿತರಣೆ ಮಾಡುವುದರಲ್ಲಿ ಅಧಿಕಾರಿಗಳು ನಿರ್ಲಕ್ಷ ಮಾಡುತ್ತಿದ್ದಾರೆ ಇದರಿಂದಾಗಿ ಬೇಸತ್ತು ಹೋಗಿದ್ದೇವೆ ಎಂದು ಜಾನುಕೊಂಡ ಗ್ರಾಮದ ಯುವಕ ಮುಖಂಡ ವಿಕಾಸ್ ತಿಳಿಸಿದ್ದಾರೆ.
ಗ್ರಾಮದ ಮುಖಂಡ ಸುರೇಶ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ ಅಧಿಕಾರಿಗಳು ಕಚೇರಿಗೆ ಸರಿಯಾದ ಸಮಯಕ್ಕೆ ಬರುವುದಿಲ್ಲ, ಗ್ರಾಮಗಳಲ್ಲಿ ನೀರಿನ ಸಮಸ್ಯೆಗಳು ಉಂಟಾದಂತ ಸಂದರ್ಭದಲ್ಲಿ ಸಮರ್ಪಕವಾಗಿ ನೀರನ್ನ ಒದಗಿಸುವಲ್ಲಿ ಅಧಿಕಾರಿ ವರ್ಗದವರು ಸಂಪೂರ್ಣವಾಗಿ ವಿಫಲರಾಗುತ್ತಾರೆ, ಸಣ್ಣಪುಟ್ಟ ಪೈಪ್ ದುರಸ್ತಿ ಕಾರ್ಯಗಳನ್ನು ಮಾಡಿಸಿ ಎಂದು ಸಾರ್ವಜನಿಕರು ದೂರು ಹೇಳಿದರು ಸಹ ಅಧಿಕಾರಿಗಳು ವಾರಾನುಗಟ್ಟಲೆ ಕಾಯಿಸುತ್ತಾರೆ ಅಧಿಕಾರಿಗಳ ಕಾರ್ಯಕ್ಷಮತೆಗೆ ಜನ ಕುಂಡ ಗ್ರಾಮದ ಸಾರ್ವಜನಿಕರು ಬೇಸತ್ತು ಹೋಗಿದ್ದೇವೆ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್ ಪ್ರತಿಭಟನೆ ಮಾಡುವ ಯುವಕರನ್ನ ಮನವೊಲಿಸಿ ಪಂಚಾಯಿತಿ ಬೀಗವನ್ನ ತೆಗೆಸಿ ಅಧಿಕಾರಿಗಳ ಮೇಲಿನ ದೂರುಗಳನ್ನು ಸ್ವೀಕರಿಸಿದರು, ಜಾನುಕೊಂಡ ಗ್ರಾಮದ ಯುವಕರೊಡನೆ ಗ್ರಾಮದ ಹಲವು ಬೀದಿಗಳಿಗೆ ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿ ಅತಿ ಶೀಘ್ರದಲ್ಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದೆಂದು ಭರವಸೆ ನೀಡಿದರು.
ಈ ಪ್ರತಿಭಟನೆಯಲ್ಲಿ ಸುರೇಶ್, ಸಂತೋಷ್, ಶಿವಕುಮಾರ್, ಧೋನಿ, ಅನಿಲ, ಬೈರೇಶ, ಮನು, ಶಶಿಕುಮಾರ್, ಮಲ್ಲೇಶ, ಅಜಯ್, ಮಧು, ಸ್ವಾಮಿ, ಸೂರಿ, ಪ್ರವೀಣ್ , ಚೇತನ್, ಪವನ್,, ಮಾರುತಿ, ಕಿರಣ್, ಲೋಕೇಶ್, ತಿಪ್ಪೇಶ್, ಅರುಣ್, ಉಮೇಶ್ , ಹರೀಶ್, ಲೋಕೇಶ್, ಪ್ರದೀಪ್, ಹಾಗೂ ಯುವಕರು ಇದ್ದರು.