ಮೈಸೂರು : ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಬೆಟ್ಟದಪುರದಲ್ಲಿ ನಡೆದಿದೆ.
ಲೋಕಾಯುಕ್ತ ಬಲೆಗೆ ಬಿದ್ದಿರುವವರು ಬೆಟ್ಟದಪುರ ಠಾಣೆಯ ಪಿಎಸ್ಐ ಶಿವಶಂಕರ್. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಠಾಣೆಯ ಪಿಎಸ್ಐ 80,000 ಹಣ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಗಳ ಬಲೆಗೆ ಬಿದ್ದಿದ್ದಾರೆ. ಪ್ರಕರಣ ಒಂದನ್ನು ಇತ್ಯರ್ಥ ಗೊಳಿಸಲು ಲಂಚಕ್ಕೆ ಶಿವಶಂಕರ್ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ ಲೋಕಾ ಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. 80,000 ಹಣ ಪಡೆಯುವ ವೇಳೆ ಪಿಎಸ್ಐ ಶಿವಶಂಕರ್ ರೆಡ್ ಹ್ಯಾಂಡ್ ಆಗಿ ಸಿಗಿಬಿದ್ದಿದ್ದಾರೆ. ಸದ್ಯ ಪಿಎಸ್ಐ ಶಿವಶಂಕರ್ ವಶಕ್ಕೆ ಪಡೆದು ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.