ಬೆಂಗಳೂರು : ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸಿವೆ. ಈ ಬದಲಾವಣೆಯ ನಂತರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳು ಆಗಸ್ಟ್ 1 ರಿಂದ ದುಬಾರಿಯಾಗಿದೆ. ಗೃಹ ಬಳಕೆಗೆ ಬಳಸುವ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಸಮಾಧಾನದ ಸಂಗತಿ. ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ನ ಬೆಲೆ 8.50 ರೂ. ಏರಿಕೆಯಾಗಿದೆ.
