ನವದೆಹಲಿ: ದೇಶದ ತೈಲ ಮಾರುಕಟ್ಟೆ ಕಂಪನಿಗಳು ಭಾನುವಾರ (ಆಗಸ್ಟ್ 31) 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 51.50 ರೂ. ಇಳಿಕೆ ಮಾಡಿವೆ. ಇದರಿಂದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರೋದ್ಯಮಗಳಿಗೆ ಸ್ವಲ್ಪಮಟ್ಟಿಗೆ ಪರಿಹಾರ ಸಿಕ್ಕಂತಾಗಿದೆ.
ಪರಿಷ್ಕೃತ ದರಗಳು ಇಂದಿನಿಂದಲೇ (ಸೆಪ್ಟೆಂಬರ್ 1) ಜಾರಿಗೆ ಬಂದಿವೆ. ಪರಿಷ್ಕೃತ ಬೆಲೆಯ ಪ್ರಕಾರ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,580 ರೂ. ಆಗಿದ್ದು, ಪ್ರತಿ ಸಿಲಿಂಡರ್‌ಗೆ 51.50 ರೂ.ಗಳ ಕಡಿತ ಆಗಿದೆ. ಬೆಂಗಳೂರಿನಲ್ಲಿ ವಾಣಿಜ್ಯ ಬಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಈ 51.50 ರೂ. ಇಳಿಕೆಯೊಂದಿಗೆ 1,653 ರೂ. ಆಗಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಈಗಿರುವ 855.50 ರೂ. ಮುಂದುವರಿದಿದೆ. ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ 5 ಕೆಜಿಗೆ 318.50 ರೂ. ಆಗಿದೆ. ವಾಣಿಜ್ಯ ಬಕೆಯ ಎಲ್ಪಿಜಿ ಸಿಲಿಂಡರ್ 47.5 ಕೆಜಿಗೆ 4,129 ರೂ. ಆಗಿದೆ. ಅಂದರೆ, ಇದರ ಬೆಲೆ 127 ರೂ. ಇಳಿಕೆಯಾಗಿದೆ.