ಬೆಂಗಳೂರು: ನಟ ಮಡೆನೂರು ಮನು ವಿರುದ್ಧ ಅತ್ಯಾಚಾರಕ್ಕೆ ಸಂಬಂಧಿಸಿದ ಹಾಗೆ ದೂರು ನೀಡಿದ್ದ ನಟಿ ಆ ಕೇಸನ್ನು ಹಿಂಪಡೆಯಲು ಮುಂದಾಗಿದ್ದಾರೆ.
ಮಡೆನೂರು ಮನು ಪ್ರಕರಣವನ್ನು ರಾಜಿಯಲ್ಲಿ ಮುಗಿಸಿದ್ದು, ಕೇಸು ಹಿಂದಕ್ಕೆ ಪಡೆದಿರುವುದಾಗಿ ವಿಡಿಯೋ ಮೂಲಕ ಹೇಳಲಾಗಿದೆ. ಈ ಪ್ರಕರಣ ಅಂತ್ಯವಾಗಿದೆ ಎಂದು ವಕೀಲರು ಹೇಳಿದ್ದಾರೆ.
ಈ ಪ್ರಕರಣವನ್ನು ಮನಃಪೂರ್ವಕವಾಗಿ ಹಿಂಪಡೆದಿರುವುದಾಗಿ ನಟಿ ಹೇಳಿದ್ದು, ಇದು ಮಡೆನೂರು ಮನುಗೆ ನಿರಾಳತೆ ನೀಡಿದೆ.