ಚಿತ್ರದುರ್ಗ : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶಿರಸಂಗಿ ಮಹಾಲಿಂಗ ಸ್ವಾಮಿಗಳವರ ಸಭಾ ಭವನದಲ್ಲಿಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಯಡಿಯೂರು ಸಿದ್ಧಲಿಂಗೇಶ್ವರರು ತಪೋನುಷ್ಠಾನಗೈದ ಕಗ್ಗೆರೆಯ ಬಿಎ ಪದವೀಧರ ಮಧುಕುಮಾರ್ ಅವರು ಸಿದ್ಧಗಂಗೆಯ ಶ್ರೀ ಶಿವಕುಮಾರ ಶ್ರೀಗಳವರ ಪ್ರೇರಣೆ ಹಾಗೂ ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮಿಗಳವರ ಕ್ರಿಯಾದೀಕ್ಷೆಯ ಮೂಲಕ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮಿಗಳವರಿಂದ ಜಂಗಮ ಅರ್ಥಾತ್ ಬಸವತತ್ವೋಪದೇಶ ಹಾಗೂ ಸಮಾಜ ಸೇವಾ ದೀಕ್ಷೆಯನ್ನು ಪಡೆಯುವ ಮೂಲಕ ಬಸವಾಕ್ಷ ಎಂಬ ಹೊಸ ನಾಮಾಂಕಿತದೊAದಿಗೆ ಲಾಂಛನ ದೀಕ್ಷೆ ಪಡೆದರು.
ಡಾ. ಬಸವಪ್ರಭು ಸ್ವಾಮಿಗಳು ನೂತನ ವಟುವಿಗೆ ಇಷ್ಟಲಿಂಗ ಧ್ಯಾನ, ಶಿವಯೋಗದ ಪರಿಕಲ್ಪನೆಯನ್ನು ತಿಳಿಸಿಕೊಡುತ್ತ, ವಿಭೂತಿಧಾರಣೆ, ಪ್ರಣವ ಸಂಬAಧ, ಪ್ರತಿಜ್ಞಾವಚನ, ಬಸವತತ್ತ್ವ ಬೋಧನೆಯ ಮೂಲಕ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಂಚಾಚಾರಗಳು, ಷಟ್‌ಸ್ಥಲಗಳ ಕುರಿತಾಗಿ ಬೋಧಿಸಿದರು.
ಈ ಸಂದರ್ಭದಲ್ಲಿ ಡಾ. ಬಸವಪ್ರಭು ಸ್ವಾಮಿಗಳು ಮಾತನಾಡಿ, ಎಲ್ಲಾ ಧರ್ಮಗಳಲ್ಲಿರುವಂತೆ ಲಿಂಗಾಯತ ಧರ್ಮದಲ್ಲಿ ಏಕದೇವೋಪಾಸನೆಯನ್ನು ಇಷ್ಟಲಿಂಗದ ಮೂಲಕ ಧ್ಯಾನ ಹಾಗೂ ಯೋಗವನ್ನು ಮಾಡಬಹುದಾಗಿದೆ. ಅಂತಹ ಯೋಗವನ್ನು ದೀಕ್ಷೆ ಪಡೆದ ನೂತನ ವಟುಗಳು ಧರ್ಮ ಪ್ರಚಾರದಲ್ಲಿ ತಿಳಿಸಿಕೊಡಬೇಕೆಂದು ಸಲಹೆ ಮಾಡಿದರು.
ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು ಮಾತನಾಡಿ, ಸ್ವಾಮಿಗಳಾದವರು ಸಾರ್ವಜನಿಕವಾಗಿ ಸಮಾಜದ ಸ್ವಾಸ್ಥö್ಯಕ್ಕಾಗಿ ಜನರಲ್ಲಿ ಜಾಗೃತಿ, ಅರಿವು, ಕಾಯಕಪ್ರಜ್ಞೆ, ದಾಸೋಹ ಪ್ರಜ್ಞೆ ಮೂಡಿಸುತ್ತ ಯುವಸಮೂಹ ಶಿಕ್ಷಣವಂತರಾಗಲು, ಮೂಢನಂಬಿಕೆ ಹಾಗೂ ದುಶ್ಚಟಗಳಿಂದ ದೂರವಿರಲು ತಿಳಿಹೇಳುತ್ತ ಸತ್‌ಚಿಂತನಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸುತ್ತ ಸಾಗಬೇಕೆಂದು ಸಲಹೆ ನೀಡಿದರು.
ಗುರುಮಠಕಲ್‌ನ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಜೇವರ್ಗಿ ತಾಲ್ಲೂಕು ಚಿಗರಹಳ್ಳಿ ಮರುಳಶಂಕರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು, ತುಮಕೂರು ಜಿಲ್ಲೆ ಹೊಳವನಳ್ಳಿ ಮತ್ತು ಗುಬ್ಬಿಹೊಸಳ್ಳಿಯ ಶ್ರೀ ಬಸವ ಮಹಾಲಿಂಗ ಸ್ವಾಮಿಗಳು, ನೂತನ ವಟುವಿನ ಪೋಷಕರು, ಸಂಬAಧಿಕರು ಉಪಸ್ಥಿತರಿದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ದೀಕ್ಷಾ ಸಮಾರಂಭದ ವಿಧಿ ವಿಧಾನಗಳಲ್ಲಿ ಬರುವ ವಚನಗಳನ್ನು ಹಾಡಿದರು. ವಿದ್ಯಾರ್ಥಿಗಳು ಸಾಮೂಹಿಕ ಭಜನೆ ನಡೆಸಿಕೊಟ್ಟರು.
ನೂತನ ವಟು ಪರಿಚಯ : ಮಧುಕುಮಾರ್ ಬಿ.ಎಂ., ತಂದೆ : ದಿ| ಮಂಜುನಾಥ್ ಬಿ. ತಾಯಿ : ದಾಕ್ಷಾಯಣಿ ಹೆಚ್.ಎಂ., ಜನ್ಮದಿನಾಂಕ : 20.01.1995, ಜನ್ಮಸ್ಥಳ : ಕಗ್ಗೆರೆ, ಕುಣಿಗಲ್ ತಾಲ್ಲೂಕು, ತುಮಕೂರು ಜಿಲ್ಲೆ. ಶಿಕ್ಷಣ : ಬಿ.ಎ. ಪದವೀಧರರು. ಸ್ವಾಮಿಯಾಗಲು ಸಮಾಜ ಸುಧಾರಕ ಸ್ವಾಮಿಗಳ ಪ್ರೇರಣೆ. ಇಷ್ಟಲಿಂಗದ ವೈಜ್ಞಾನಿಕತೆಯನ್ನು ಶಿವಯೋಗದ ಮೂಲಕ ತಿಳಿಸುವ ಇಚ್ಛೆ. ಯೋಗ, ಪ್ರಾಣಾಯಾಮದ ಮೂಲಕ ಆರೋಗ್ಯವಂತರಾಗಿರಲು ಸಲಹೆ ನೀಡುವುದಾಗಿ ಹೇಳುತ್ತಾರೆ. ಈಗಾಗಲೇ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ಬಸವತತ್ತ್ವ ಪ್ರಚಾರ ಮಾಡುತ್ತ ಬಸವಾದಿ ಶರಣರು ಬೋಧಿಸಿದ ತತ್ತ್ವಗಳನ್ನು ಕಾರ್ಯಕ್ರಮಗಳ ಮೂಲಕ ಹೇಳುತ್ತಿರುವಾಗಿ ಶ್ರೀಗಳು ತಿಳಿಸಿದರು. ನೂರಾರು ಸ್ವರಚಿತ ವಚನಗಳನ್ನು ಡಿಟಿಪಿ ಮಾಡಿಸಲಾಗಿದೆ. ಕನ್ನಡದೊಂದಿಗೆ ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯ ಅರಿವು ಇದೆ ಎಂದರು.