ವಚನ:
ಬಂದು ಬಂದದ್ದರಿಯರಿದೆ, ಹೋಗಿ ಹೋದದ್ದರಿಯದೆ,
ಇದ್ದು ಇದ್ದದ್ದರಿಯದೆ, ನೊಂದು ನೊಂದದ್ದರಿಯದೆ,
ಕೆಟ್ಟು ಕೆಟ್ಟದ್ದರಿಯದೆ, ಎಂಬತ್ನಾಲ್ಕುಲಕ್ಷ ಜೀವರಾಶಿ,
ಯೋನಿದ್ವಾರದಲ್ಲಿ ತಿರುತಿರುಗಿ ಬಂದದ್ದನ್ನರಿಯದೆ,
ಏನೂ ಏನರಿಯದ್ಹಾಂಗೆ ಅರಿತು ಅರಿಯದ್ಹಾಂಗೆ ಇರ್ದೆಯಲ್ಲಾನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
-ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ