ಮಹಾರಾಷ್ಟ್ರ: ವಿಧಾನಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಅವರ ಹೀನಾಯ ಸೋಲಿನ ನಂತರ, ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾನಾ ಪಟೋಲೆ ರಾಜೀನಾಮೆ ನೀಡಿದ್ದಾರೆ.ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದ 103 ಸ್ಥಾನಗಳಲ್ಲಿ ಕೇವಲ 16 ಸ್ಥಾನಗಳನ್ನು ಗೆದ್ದ ನಂತರ ಅವರು ಸ್ಥಾನದಿಂದ ಕೆಳಗಿಳಿದರು. ರಾಜ್ಯಾದ್ಯಂತ ಕಾಂಗ್ರೆಸ್‌ನ ನೀರಸ ಪ್ರದರ್ಶನದ ಹೊರತಾಗಿ, ಪಟೋಲೆ ಅವರು ತಮ್ಮ ಸ್ವಂತ ಕ್ಷೇತ್ರವಾದ ಸಾಕೋಲಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಹೆಣಗಾಡಿದರು, ಅಲ್ಲಿ ಅವರು ಕೇವಲ 208 ಮತಗಳ ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು.
ಮಹಾಯುತಿ ಮತ್ತು ಎಂವಿಎ ನಡುವೆ ಚುನಾವಣೆಯಲ್ಲಿ ಪ್ರಮುಖ ಸ್ಪರ್ಧೆ ಏರ್ಪಟ್ಟಿತ್ತು. ಫಲಿತಾಂಶದಲ್ಲಿ, 288 ಸದಸ್ಯ ಬಲದ ವಿಧಾನಸಭೆಯಲ್ಲಿ ಮಹಾಯುತಿ, ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ (ಅಜಿತ್ ಬಣ) ಮೈತ್ರಿಕೂಟ 235 ಸ್ಥಾನಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.
ಪಟೋಲೆ ಮೂಲತಃ ಕಾಂಗ್ರೆಸ್ಸಿಗರಾಗಿದ್ದರು, ಆದರೆ ಕೆಲವು ಕಾಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕಳೆದ ಬಾರಿ ಕಾಂಗ್ರೆಸ್‌ನ ನಾನಾ ಪಟೋಲೆ ಅವರು ಬಿಜೆಪಿಯ ಡಾ.ಪರಿಣಯ್ ಫುಕೆ ಅವರನ್ನು 6240 ಮತಗಳಿಂದ ಸೋಲಿಸಿದ್ದರು.ಪಟೋಲೆ ಕೇವಲ 208 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿ ಅವರು ಒಟ್ಟು 96795 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಅವಿನಾಶ್ 96587 ಮತಗಳನ್ನು ಪಡೆದಿದ್ದಾರೆ.