ಚಿತ್ರದುರ್ಗ: ಸರ್ಕಾರಿ ಪದವಿ ಪೂರ್ವ ಕಾಲೇಜು, ಚಿಕ್ಕಗೊಂಡನಹಳ್ಳಿ, ಚಿತ್ರದುರ್ಗ ತಾಲ್ಲೂಕಿನ ಉಪನ್ಯಾಸಕರಾದ ಮಹೇಶ್ ಕುಂಚಿಗನಾಳ್ ರವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿಯ ದಿನಾಂಕ:31-12-2024ರAದು ಪಿಹೆಚ್‌ಡಿ ಪದವಿ ನೀಡಿ ಅಧಿಸೂಚನೆ ಹೊರಡಿಸಿದೆ.
ಮಹೇಶ್ ಕುಂಚಿಗನಾಳ್ ರವರು ಖ್ಯಾತ ಸಾಹಿತಿಗಳಾದ ಡಾ.ರಾಜಶೇಖರ.ಎಸ್ ಬಸುಪಟ್ಟಣ ರವರ ಮಾರ್ಗದರ್ಶನದಲ್ಲಿ “ಪಂಪನ ಪಾತ್ರಗಳು” ಮನಶಾಸ್ತ್ರೀಯ ಅಧ್ಯಯನ ಎಂಬ ವಿಷಯದ ಕುರಿತು ಮಹಾ ಪ್ರಬಂಧವನ್ನು ಮಂಡಿಸಿದ್ದರು.
ನಮ್ಮ ಸಂಶೋಧನೆಗೆ ಸಹಕಾರ ನೀಡಿದ ಡಾ.ಲಕ್ಷ್ಮಣ್ ತೆಲಗಾವಿ, ಡಾ.ಅಮತೇಶಯತಹಲ್, ಡಾ.ಲೋಕೇಶ ಅಗಸನಕಟ್ಟೆ, ಡಾ.ಕಣುಮಪ್ಪ, ಪ್ರೊ.ಚಂದ್ರಶೇಖರ ನಂಗಲಿ, ಪ್ರಿಯಾಂಕ.ಎಲ್.ಜಿ, ಪ್ರೊ.ದೇವೆಂದ್ರಪ್ಪ, ಲೋಕೇಶ.ಹೆಚ್.ಎನ್, ಪ್ರೊ.ರಘುರಾಮ್, ರಾಧಕೃಷ್ಣ, ಪ್ರಸನ್ನ, ಪ್ರದೀಪ, ಸರೋಜಮ್ಮ, ಪ್ರೊ.ನಟರಾಜು ಡಾ|| ಜ್ಯೋತಿ ರವರನ್ನು ಸ್ಮರಿಸಿದ್ದಾರೆ.