ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಮತ್ತೆ ಗಡಿ ಪಾರು ಮಾಡಿ ಪುತ್ತೂರು ಸಹಾಯಕ ಆಯುಕ್ತ ಸ್ಟೆಲ್ಲಾ ವರ್ಗೀಸ್ ಆದೇಶ ಹೊರಡಿಸಿದ್ದಾರೆ.
ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡಿಪಾರಾಗಿರುವ ಆದೇಶವನ್ನು ಬೆಳ್ತಂಗಡಿ ಪೊಲೀಸರು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಗಡಿಪಾರು ಮಾಡಿರುವ ಬಗ್ಗೆ ಬೆಳ್ತಂಗಡಿ ಪೊಲೀಸರು ಗುರುವಾರ ನೋಟಿಸ್ ನೀಡಲು ಉಜಿರೆಯ ಅವರ ಮನೆಗೆ ತೆರಳಿದಾಗ ಮಹೇಶ್ ಶೆಟ್ಟಿ ಮನೆಯಲ್ಲಿ ಇರಲ್ಲಿಲ್ಲ. ಈ ನಡುವೆ, ಬೆಳ್ತಂಗಡಿ ಪೊಲೀಸರು ಮಹೇಶ ಶೆಟ್ಟಿ ಅವರ ಗಡೀಪಾರು ಆದೇಶವನ್ನು ಧ್ವನಿವರ್ಧಕದ ಮೂಲಕ ಉಜಿರೆ ಪೇಟೆಯಲ್ಲಿ ಗುರುವಾರ ಮುಸ್ಸಂಜೆ ಸಾರ್ವಜನಿಕರಿಗೆ ತಿಳಿಸುವ ಕಾರ್ಯ ಮಾಡಿದರು.
ನ್ಯಾಯಾಲಯದ ಮತ್ತು ಪುತ್ತೂರು ಉಪ ವಿಭಾಗಾಧಿಕಾರಿ ಆದೇಶವನ್ನು ಮೈಕ್ ಮೂಲಕ ಪೊಲೀಸರು ಓದಿ ಸಾರ್ವಜನಿಕರಿಗೆ ತಿಳಿಸಿದರು.
































