ಬೆಂಗಳೂರು: 2024-25ನೇ ಸಾಲಿನ SSLC ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಮಾ. 24 ರಿಂದ ಏ. 17 ರವರೆಗೂ ಪರೀಕ್ಷೆ ನಡೆಸಲು ತಾತ್ಕಾಲಿಕ ಟೈಂಟೇಬಲ್ ಸಿದ್ಧಪಡಿಸಲಾಗಿದೆ.
ಈ ಪರೀಕ್ಷಾ ದಿನಾಂಕಗಳಿಗೆ ಯಾವುದೇ ಆಕ್ಷೇಪಣೆ ಬರದಿದ್ದಲ್ಲಿ ಹಾಗೂ ಇತರ ಸಮಸ್ಯೆಗಳು ಎದುರಾಗದಿದ್ದಲ್ಲಿ ಇದೇ ದಿನಾಂಕಗಳ ನಡುವೆ ಪರೀಕ್ಷೆ ನಡೆಸಲಾಗುತ್ತದೆ.
ಆಕ್ಷೇಪಣೆ ಬಂದರೆ ಡಿ. 2ನೇ ವಾರದ ವೇಳೆಗೆ ಅಂತಿಮ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಮೇನಲ್ಲಿ ಫಲಿತಾಂಶ ಬಿಡುಗಡೆ ಮಾಡಲಾಗುತ್ತದೆ..