ಹಾರ್ಟ್ ಅಟ್ಯಾಕ್ ನಿಂದ ಬಚಾವಾಗಲು ಈ ಎರಡು ಬ್ಲಡ್ ಟೆಸ್ಟ್ ಕೂಡಲೇ ಮಾಡಿಸ್ಕೊಳ್ಳಿ

WhatsApp
Telegram
Facebook
Twitter
LinkedIn

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರಲ್ಲಿ ಹೃದಯಾಘಾತ ಅನ್ನುವಂತದ್ದು ಆತಂಕವನ್ನು ಸೃಷ್ಟಿ ಮಾಡಿಬಿಟ್ಟಿದೆ. ಕೂತಲ್ಲಿ, ಪ್ರಯಾಣದಲ್ಲಿ, ಮಲಗಿದ್ದಲ್ಲೇ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪುತ್ತಿರುವಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಯಾವುದೇ ವಯಸ್ಸಿನ ಹಂಗಿಲ್ಲದೆ ಬರುವ ಈ ಹೃದಯಾಘಾತ ಕಾಮನ್ ಆಗಿ ಬಿಟ್ಟಿದೆ. ಈ ಎರಡು ಬ್ಲಡ್ ಟೆಸ್ಟ್ ಗಳು ಹೃದಯಾಘಾತ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯಂತೆ…

ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡ ಹೃದಯಾಘಾತಕ್ಕೆ ಪ್ರಮುಖ ಕಾರಣ. ಇದರ ಮೇಲೆ ನಿಗಾ ಇಡೋದರ ಜೊತೆಗೆ ಎರಡು ರೀತಿಯ ರಕ್ತ ಪರೀಕ್ಷೆಯನ್ನು ಬಹು ಮುಖ್ಯವಾಗಿ ಮಾಡಿಕೊಳ್ಳಬೇಕು. ಹೋಮೋಸಿಸ್ಟೈನ್ ಮತ್ತು ಸಿ ರಿಯಾಕ್ಟಿವ್ ಪ್ರೊಟೀನ್ ಎಂಬುವುದು ರಕ್ತಪರೀಕ್ಷೆಯ ಹೆಸರು.

ಈ ಎರಡು ಪರೀಕ್ಷೆಗಳು ಹೃದಯಾಘಾತ ತಡೆಯುವಲ್ಲಿ ಏನು ಪಾತ್ರ ವಹಿಸುತ್ತೆ ಗೊತ್ತಾ..?

ಹೋಮೋಸಿಸ್ಟೈನ್ ಅಂದ್ರೆ ರಕ್ತದಲ್ಲಿ ಕಂಡುಬರುವಂತಹ ಅಮೈನೋ ಆಮ್ಲ. ಪ್ರೋಟೀನ್ ಗಳನ್ನು ತಯಾರಿಸಲು ಸಹಕಾರಿ. ಒಂದು ವೇಳೆ ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾದಾಗ ನೇರವಾಗಿ ಹೃದಯ ಮತ್ತು ರಕ್ತನಾಳಗಳ ಖಾಯಿಲೆಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲದೆ ಇದು ರಕ್ತದಲ್ಲಿ ಹೆಚ್ಚಾದರೆ ಹಾರ್ಟ್ ಅಟ್ಯಾಕ್ ಸಂಭವ ಕೂಡಾ ಹೆಚ್ಚು. ಆದ್ದರಿಂದ ಇದರ ಪರೀಕ್ಷೆ ಮಾಡಿದ್ರೆ ಹೃದಯಾಘಾತದ ಸಾಧ್ಯತೆ ಬಗ್ಗೆ ತಿಳಿದುಕೊಳ್ಳಬಹುದು.

ಮತ್ತೊಂದು ಸಿ ರಿಯಾಕ್ಟಿವ್ ಪ್ರೋಟೀನ್ ಪರೀಕ್ಷೆ- ದೇಹದಲ್ಲಿ
ಉರಿಯೂತ ಉಂಟಾದಾಗ ಯಕೃತ್ತು ಇದನ್ನು ಉತ್ಪಾದಿಸುತ್ತದೆ. ನಮ್ಮ ಬಾಡಿಯಲ್ಲಿ ಸಿಆರ್ ಪಿ ಮಟ್ಟ ಹೆಚ್ಚಾದಾಗ ಸಂಧಿವಾತ, ಹೃದಯ ಸಂಬಂಧಿ ಖಾಯಿಲೆಗಳು ಆಹ್ವಾನವಾಗುತ್ತದೆ. ಸಿಆರ್ ಪಿ ಮಟ್ಟ ಹೆಚ್ಚಿದ್ದಷ್ಟು ಹೃದಯಾಘಾತದ ಸಾಧ್ಯತೆ ಕೂಡಾ ಹೆಚ್ಚು. ಇದರ ಪರೀಕ್ಷೆ ಮಾಡಿಕೊಂಡರೂ ಕೂಡಾ ನಮಗೆ ಹೃದಯಾಘಾತದ ಲಕ್ಷಣಗಳ ಬಗ್ಗೆ ಎಚ್ಚೆತ್ತುಕೊಳ್ಳಬಹುದು. ಪ್ರಾಣ ಕಂಟಕದಿಂದ ರಕ್ಷಣೆ ಸಿಗಬಹುದು. ಮೊದಲೇ ಈ ಪರೀಕ್ಷೆ ಮಾಡಿಕೊಂಡರೆ ಅಪಾಯ ತಪ್ಪಿದಂತಾಗುತ್ತದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon