ತಿರುವನಂತಪುರಂ : ಮಲಯಾಳಂ ನಟ ದಿಲೀಪ್ ಶಂಕರ್ ಭಾನುವಾರ ತಿರುವನಂತಪುರಂನ ಹೋಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಸಾವಿಗೆ ಕಾರಣ ಇನ್ನೂ ಬಹಿರಂಗವಾಗಿಲ್ಲ. ವರದಿಗಳ ಪ್ರಕಾರ ದಿಲೀಪ್ ಡಿಸೆಂಬರ್ 19 ರಂದು ಹೋಟೆಲ್‌ಗೆ ಚೆಕ್ ಇನ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ದಿಲೀಪ್ ಶಂಕರ್ ಅವರು ಹೋಟೆಲ್‌ನಲ್ಲಿ ತಂಗಿದ್ದಾಗ ಒಮ್ಮೆಯೂ ತಮ್ಮ ಕೊಠಡಿಯಿಂದ ಹೊರಬರಲಿಲ್ಲ. ಅವರ ಸಹನಟರು ನಟನಿಗೆ ಕರೆ ಮಾಡಿದ್ದರು ಆದರೆ ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ನಂತರ, ಅವರು ದಿಲೀಪ್‌ನನ್ನು ಹುಡುಕಿ ಹೋಟೆಲ್‌ಗೆ ಆಗಮಿಸಿದರು ಮತ್ತು ಅವರ ಕೊಠಡಿಯನ್ನು ತೆರೆಯಲು ಹೋಟೆಲ್ ಸಿಬ್ಬಂದಿಯನ್ನು ಕೇಳಿದ್ದಾರೆ ಆಗ ಕೋಣೆಯೊಳಗೆ ಶವವಾಗಿ ಪತ್ತೆಯಾಗಿದ್ದಾನೆ.
ದೂರದರ್ಶನ ಸರಣಿ ಪಂಚಾಗ್ನಿ ಚಿತ್ರೀಕರಣಕ್ಕಾಗಿ ದಿಲೀಪ್ ಶಂಕರ್ ತಿರುವನಂತಪುರದಲ್ಲಿದ್ದರು ಎಂದು ವರದಿಗಳು ಹೇಳಿವೆ. ದಿಲೀಪ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ನಿರ್ದೇಶಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದಿಲೀಪ್ ಅವರು ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಗಳು ಹೇಳಿವೆ.
ದಿಲೀಪ್ ಶಂಕರ್ ಸಾವಿನ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫೋರೆನ್ಸಿಕ್ ತಂಡವು ಕೊಠಡಿಯನ್ನು ಪರಿಶೀಲಿಸುತ್ತದೆ. ಪೊಲೀಸರ ಪ್ರಕಾರ, ನಟನ ಸಾವಿಗೆ ಯಾವುದೇ ಅಸ್ವಾಭಾವಿಕ ಅಂಶಗಳಿಲ್ಲ ಎಂದು ತಿಳಿದು ಬಂದಿದೆ. ಎರ್ನಾಕುಲಂ ಮೂಲದವರಾದ ದಿಲೀಪ್ ಶಂಕರ್ ಹಲವಾರು ಜನಪ್ರಿಯ ಮಲಯಾಳಂ ಕಾರ್ಯಕ್ರಮಗಳಿಂದ ಹೆಸರುವಾಸಿಯಾಗಿದ್ದರು.