ಕೇರಳ: ಮಲಯಾಳಂ ನಿರ್ದೇಶಕ ಶಫಿ (56) ನಿಧನರಾಗಿದ್ದಾರೆ. ಕಳೆದ ಜ.16 ರಂದು ಅವರಿಗೆ ಹೃದಯಾಘಾತವಾಗಿದ್ದು, ಇಂದು ಬೆಳಗ್ಗೆ ಕೊಚ್ಚಿಯ ಆಸ್ಪತ್ರೆಯಲ್ಲಿ ಅವರು ನಿಧನರಾದರು.
ಹಾಸ್ಯ ಚಿತ್ರಗಳಿಂದಲೇ ಜನಪ್ರಿಯರಾಗಿರುವ ಶಫಿ, 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ‘ಒನ್ ಮ್ಯಾನ್ ಶೋ’ ಅವರ ಚೊಚ್ಚಲ ಚಿತ್ರ. 2022ರ ‘ಆನಂದ ಪರಮಾನಂದಂ’ ಅವರ ಕೊನೆಯ ಚಿತ್ರದವರದಾಗಿತ್ತು.
ಶಫಿ 2 ದಶಕಗಳಿಂದ ಸತತ ಯಶಸ್ವಿ ಚಲನಚಿತ್ರಗಳ ಸರಣಿಯೊಂದಿಗೆ ಮಲಯಾಳಂ ಸಿನಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದನ್ನು ಯಾರು ಮರೆಯುವಂತ್ತಿಲ್ಲ.!