ಮಂಗಳೂರು: ಲವ್ ಜಿಹಾದ್ ಪ್ರಕರಣ-ಮಗಳು ಮುಸ್ಲಿಂ ಯುವಕನನ್ನು ಬಿಟ್ಟು ಬರ್ತಿಲ್ಲ-ಕಣ್ಣೀರಿಟ್ಟ ವೈಶಾಲಿ ಪೋಷಕರು

WhatsApp
Telegram
Facebook
Twitter
LinkedIn
ಮಂಗಳೂರು: ಸುರತ್ಕಲ್‌ನ ಪಿಜಿಯಲ್ಲಿದ್ದ ವೈಶಾಲಿ ಎಂಬ ವಿದ್ಯಾರ್ಥಿನಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಬಲೆಗೆ ಕೆಡವಿ ಅನ್ಯಕೋಮಿನ ಯುವಕ ಮದುವೆ ಆಗಿರುವ ವಿಚಾರವಾಗಿ ಪ್ರೆಸ್ ಕ್ಲಬ್ ನಲ್ಲಿ ಮಾತಾಡಿದ ಯುವತಿಯ ಪೋಷಕರು ನಮಗೆ ನ್ಯಾಯ ಬೇಕು. ಕೇರಳ ಪೊಲೀಸರಿಂದ ನಮಗೆ ನ್ಯಾಯ ಸಿಗುವುದಿಲ್ಲ. ನಮ್ಮ ಮಗಳನ್ನು ಹುಡುಕಿಕೊಂಡು ಕೇರಳದ ವಯನಾಡಿಗೆ ಹೋದೆವು. ಆದರೆ ನಮ್ಮ ಜೊತೆಗೆ ಬರುತ್ತೇನೆ ಎಂದು ಲಿಖಿತವಾಗಿ ಬರೆದುಕೊಟ್ಟ ನಮ್ಮ ಮಗಳು ವೈಶಾಲಿ ಬಳಿಕ ವಯನಾಡು ಪೊಲೀಸರು ಮತ್ತು ಹುಡುಗನ ಕಡೆಯವರ ಮಾತುಗಳನ್ನು ಕೇಳಿ ಮನೆಗೆ ಬರಲು ನಿರಾಕರಿಸುತ್ತಿದ್ದಾಳೆ. ಇದರಲ್ಲಿ ಎಸ್‌ಡಿಪಿಐ ಅವರ ಕೈವಾಡ ಹಾಗು ಲವ್ ಜಿಹಾದ್ ಇಲ್ಲಿ ನಡೆದಿದೆ ಎಂದು ಅನ್ಯಕೋಮಿನ ಯುವಕನೊಂದಿಗೆ ಪರಾರಿ ಆಗಿರುವ ಯುವತಿ ವೈಶಾಲಿ ಹೆತ್ತವರು ಕಣ್ಣೀರಿಟ್ಟಿದ್ದಾರೆ. ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ, ವೈಶಾಲಿ ತಂದೆ ವಿಶ್ವನಾಥ್ ಹಾಗೂ ತಾಯಿ ಲತಾ ನಮ್ಮ ಜೊತೆಗೆ ಚೆನ್ನಾಗಿ ಮಾತನಾಡಿದ್ದ ಮಗಳು ಬಳಿಕ ಮನೆಗೆ ಬರಲು ನಿರಾಕರಿಸಿದ್ದಾಳೆ. ನಮ್ಮ ಜೊತೆಗೆ ಬಾ ಅವನನ್ನು ಮದುವೆಯಾಗುವುದು ಬೇಡ ಎಂದಾಗ ಬರುತ್ತೇನೆ ಎಂದು ಹೇಳಿದವಳು ಮತ್ತೆ ಅವರ ಜೊತೆಗೆ ಮಾತನಾಡಿದ ಅವಳು ಬರುವುದಿಲ್ಲ ಎಂದು ಹೇಳಿದಳು.ಕೇರಳ ಪೊಲೀಸರು ನಮ್ಮ ಯಾವ ಮಾತನ್ನೂ ಕೇಳದೇ ಯುವಕನ ಕಡೆಯವರ ಮಾತನ್ನು ಕೇಳಿಕೊಂಡು ಆಕೆಯನ್ನು ಅವರ ಜೊತೆಗೆ ಕಳುಹಿಸಿಕೊಟ್ಟಿದ್ದಾಳೆ. ನಮಗೆ ನ್ಯಾಯ ಮರೀಚಿಕೆ ಆಗಿದೆ. ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಲೇರುತ್ತೇವೆ ಎಂದು ನೊಂದು ನುಡಿದಿದ್ದಾರೆ.. ಹದಿಹರೆಯದ ಹಿಂದು ಹೆಣ್ಮಕ್ಕಳನ್ನು ಮೋಸದ ಬಲೆಗೆ ಕೆಡವಿ, ಪ್ರೀತಿ ಪ್ರೇಮದ ಹೆಸರಿನಲ್ಲಿ ಅವರನ್ನು ತಮಗೆ ಬೇಕಾದಂತೆ ಬಳಸಿ, ಮತಾಂತರ ಮಾಡಿ ಅವರ ಜೀವನದಲ್ಲಿ ಆಟವಾಡುವ ಕೆಲಸವನ್ನು ಜಿಹಾದಿ ಶಕ್ತಿಗಳು ನಡೆಸುತ್ತಿದ್ದು, ಇದೀಗ ವೈಶಾಲಿ ಎಂಬ ಹೆಣ್ಮಗು ಬಲಿಯಾಗಿರುವುದು ವಿಷಾದಕರ ಸಂಗತಿ ಎಂದು ಹಿಂದು ಜಾಗರಣ ವೇದಿಕೆ ಮಂಗಳೂರು ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಸುರತ್ಕಲ್‌ನ ಪಿಜಿಯಲ್ಲಿದ್ದ ವೈಶಾಲಿ ಎಂಬ ವಿದ್ಯಾರ್ಥಿನಿಯನ್ನು ಪ್ರೀತಿ ಪ್ರೇಮದ ಹೆಸರಿನಲ್ಲಿ ಬಲೆಗೆ ಕೆಡವಿ ಅನ್ಯಕೋಮಿನ ಯುವಕ ಮದುವೆ ಆಗಿರುವ ವಿಚಾರದ ಕುರಿತಂತೆ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿಂದು ಜಾಗರಣ ವೇದಿಕೆ ಮುಖಂಡ ನರಸಿಂಹ ಶೆಟ್ಟಿ ಮಾಣಿ, ಹಿಂದೂ ಸಮಾಜದಲ್ಲಿರುವ ಹೆಣ್ಮಕ್ಕಳನ್ನೇ ಟಾರ್ಗೆಟ್ ಮಾಡಿಕೊಂಡು ಮತಾಂತರ ಮಾಡಲಾಗುತ್ತಿದೆ. ಮತಾಂತರಕ್ಕೆ, ಲವ್ ಜಿಹಾದ್‌ಗೆ ಮೂಲ ತಾಣವೇ ಕೇರಳವಾಗಿದೆ ಎಂದು ಹೇಳಿದರು ಈ ಕೃತ್ಯದಲ್ಲಿ ಎಸ್‌ಡಿಪಿಐ ನೇರ ಶಾಮೀಲಾಗಿದೆ ಎಂದರು. ಯುವತಿಯನ್ನು ಮದುವೆಯಾಗಿರುವ ಅನ್ಯಕೋಮಿನ ಯುವಕ ಮೊಹಮ್ಮದ್ ಮಿದ್ಯಾಕ್ ಸುರತ್ಕಲ್‌ ನ ಎಸ್‌ಡಿಪಿಐ ನಾಯಕನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಆತನ ಕುಮ್ಮಕ್ಕಿನಿಂದ ಈ ಕೃತ್ಯ ಎಸಗಿದ್ದಾನೆ. ಅಲ್ಲದೆ ಕೇರಳದ ವಯನಾಡಿನ ಠಾಣೆಯಲ್ಲಿ ಪೋಷಕರ ಜೊತೆಗೆ ಮಾತುಕತೆ ನಡೆಸಿದ ಸಂದರ್ಭದಲ್ಲೂ ಹುಡುಗಿಗೆ ಬೆದರಿಕೆ ಹಾಕಿ ಆಕೆಯನ್ನು ಕಳುಹಿಸಿಕೊಟ್ಟಿಲ್ಲ ಎಂದು ದೂರಿದರು.ಸುರತ್ಕಲ್ ಪರಿಸರದಲ್ಲಿ ಡ್ರಗ್ ಮಾಫಿಯಾ ಮಿತಿ ಮೀರುತ್ತಿದ್ದು ಇದಕ್ಕೂ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಮತಾಂತರ, ಗೋಕಳ್ಳತನ, ಲವ್ ಜಿಹಾದ್, ಡ್ರಗ್ ತಡೆಗೆ ಸೂಕ್ತ ಕಾನೂನು ಸರಕಾರ ಜಾರಿಗೆ ತರಬೇಕು. ಜೊತೆಗೆ ಸರಕಾರ ಗಂಭೀರವಾಗಿ ಈ ವಿಚಾರವನ್ನು ಪರಿಗಣಿಸಿ, ನಗರ ಪೊಲೀಸರು ಮಧ್ಯೆ ಪ್ರವೇಶಿಸಿ ಯುವತಿ ಪೋಷಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon