ದಾವಣಗೆರೆ : ರಾಜ್ಯಾದ್ಯಂತ ಹೆಸರು ಮಾಡಿದ್ದ ಹೈ ಸ್ಪೀಡ್ ಖ್ಯಾತಿಯ ಮಣಿ ಎಂಬ ಕುರಿಯು ಕುರಿ ಕಾಳಗದಲ್ಲಿ ವೀರ ಮರಣವಣ್ಣಪ್ಪಿದೆ.
ಹೊಸ ಕುಂದುವಾಡ ಗ್ರಾಮದ ಹೆಸರಾಂತ ಟಗರು ಹೈ ಸ್ಪೀಡ್ ಮಣಿ ನವೆಂಬರ್ 2,2025 ರಂದು ನಡೆದ ರಾಜ್ಯ ಮಟ್ಟದ ಕುರಿ ಕಾಳಗದಲ್ಲಿ ಮರಣ ಹೊಂದಿದೆ.
ಈ ಹಿಂದೆ ಈ ಕುರಿ ಮೂರು ಕಣಗಳಲ್ಲಿ ಪ್ರಥಮ ಸ್ಥಾನ ಪಡೆದು ಮೂರು ಬೈಕ್ ಗಳನ್ನು ತನ್ನದಾಗಿಸಿಕೊಂಡಿತು. ರಾಜ್ಯಾದ್ಯಂತ ಹೆಸರು ಮಾಡಿತ್ತು. ಹಾಲೇಶ್ ಎಂಬುವರು ಈ ಕುರಿಯನ್ನು ಚೆನ್ನಾಗಿ ಪೋಷಣೆ ಮಾಡಿದ್ದರು. ಕುರಿ ಕಾಳಗದಲ್ಲಿ ತನ್ನದೇ ಆದಂತಹ ಚಾಪನ್ನು ಮಾಡಿಸಿತ್ತು. ಆದರೆ ಕುರಿ ಕಾಳಗದಲ್ಲಿ ಸಾವನ್ನಪ್ಪಿದ್ದನ್ನು ಕಂಡು ಕುರಿ ಮಾಲೀಕನ ಕಣ್ಣೀರು ಹಾಕುತ್ತಾ ವೇದನೆಯನ್ನು ಯಾರಿಗೂ ಹೇಳಿಕೊಳ್ಳಲಾಗದೆ ಸ್ಥಿತಿ ಅವನದಾಗಿತ್ತು.
ಟಗರು ಹೈ ಸ್ಪೀಡ್ ಮಣಿಯನ್ನು ಹೊಸ ಕುಂದುವಾಡದ ತುಂಬಾ ಮೆರವಣಿಗೆ ಮಾಡಿ ತಮ್ಮ ನಿವಾಸದಲ್ಲಿ ಸಮಾಧಿ ಮಾಡಿದರು.

































