ಶಿವಮೊಗ್ಗ: ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಶಿವಮೊಗ್ಗದ ವಿಜಯನಗರ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥರಾವ್ (೪೭) ಅವರ ಅಂತ್ಯಸAಸ್ಕಾರ ಬ್ರಾಹ್ಮಣ ಸಂಪ್ರದಾಯದ0ತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ಮಧ್ಯಾಹ್ನ ೪ ಗಂಟೆ ವೇಳೆಗೆ ಇಲ್ಲಿನ ತುಂಗಾ ನದಿ ತಟದಲ್ಲಿರುವ ರೋಟರಿ ಚಿತಾಗಾರದಲ್ಲಿ ನೆರವೇರಿತು. ಮಂಜುನಾಥರಾವ್ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನಗೊಂಡಿತು.
ಬಿಕ್ಕಿ ಬಿಕ್ಕಿ ಅಳುತ್ತಲೇ ಪುತ್ರ ಅಭಿಜೇಯ ಅಂತಿಮ ವಿಧಿ ವಿಧಾನ ನೆರವೇರಿಸಿದ ಬಳಿಕ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಂತಿಮ ವಿಧಿ ವಿಧಾನ ನೆರವೇರಿಸುವ ವೇಳೆ ತಂದೆಯನ್ನು ನೆನೆದು ಅಭಿಜೇಯ ದುಃಖದ ಕಟ್ಟೆ ಒಡೆದಿತ್ತು. ಬೆಳಿಗ್ಗೆಯಿಂದ ಧೈರ್ಯದಿಂದಲೇ ಎಲ್ಲವನ್ನು ಸಂಭಾಳಿಸುತ್ತಿದ್ದ ಪತ್ನಿ ಪಲ್ಲವಿ ಕೂಡಾ ಪತಿಯನ್ನು ನೆನೆದು ಕಣ್ಣೀರಿಟ್ಟರು. ಪತಿಯ ಕೈಹಿಡಿದು, ಕಾಲು ಮುಟ್ಟಿ ನಮಿಸಿದರು. ಅಂತಿಮ ಕ್ಷಣಗಳಲ್ಲಿ ಕುಟುಂಬದವರು ಮಂಜುನಾಥರಾವ್ ಅವರ ಪಾರ್ಥಿವ ಶರೀರಕ್ಕೆ ಕಣ್ಣೀರಿಡುತ್ತಲೆ ನಮಸ್ಕರಿಸಿದರು.
ಪಲ್ಲವಿ ಅವರ ತಾಯಿ ಗೀತಾ, ಮಂಜುನಾಥರಾವ್ ಸಹೋದರಿ ರೂಪ, ಪಲ್ಲವಿ ಅವರ ಸಹೋದರಿ ಸೇರಿದಂತೆ ಬಂಧು ಬಳಗದವರು ಅಂತ್ಯಸAಸ್ಕಾರದ ವೇಳೆ ಉಪಸ್ಥಿತರಿದ್ದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಬಿಜೆಪಿ ಮುಖಂಡ ಎಸ್. ದತ್ತಾತ್ರಿ ಮತ್ತಿತರರು ಅಂತ್ಯಸAಸ್ಕಾರ ನೆರವೇರುವವರೆಗೂ ಇದ್ದರು.
ಇದಕ್ಕೂ ಮುನ್ನಾ ರೋಟರಿ ಚಿತಾಗಾರದಲ್ಲಿ ಮಂಜುನಾಥರಾವ್ ಪಾರ್ಥಿವ ಶರೀರಕ್ಕೆ ಪೊಲೀಸ್ ಗೌರವ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯರಾದ ಬಲ್ಕೀಶ್‌ಭಾನು, ಡಾ. ಧನಂಜಯಸರ್ಜಿ, ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಮಿಥುನ್‌ಕುಮಾರ್, ಪೌರಾಯುಕ್ತೆ ಕವಿತಾ ಯೋಗಪ್ಪನವರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಅಂತಿಮ ನಮನ ಸಲ್ಲಿಸಿದರು.