ಹರಿಯಾಣ: ಮಹೇಂದ್ರಗಢ ಬೈಪಾಸ್ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ, ಅಂತಾರಾಷ್ಟ್ರೀಯ ಶೂಟರ್ ಮನು ಭಾಕರ್ ಅವರ ಅಜ್ಜಿ ಮತ್ತು ಚಿಕ್ಕಪ್ಪ ತಮ್ಮ ಸ್ಕೂಟರ್ ಬ್ರೆಝಾ ಕಾರಿಗೆ ಡಿಕ್ಕಿ ಹೊಡೆದು ದುರಂತ ಸಾವಿಗೀಡಾದರು. ಅಪಘಾತದ ನಂತರ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅಧಿಕಾರಿಗಳು ಶವಗಳನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡಿದ್ದು, ಅಪಘಾತದ ಬಗ್ಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ.
ಮನು ಭಾಕರ್ ಅವರ ಚಿಕ್ಕಪ್ಪ ಯುಧವೀರ್ ಸಿಂಗ್ ರೋಡ್ವೇಸ್ನಲ್ಲಿ ಚಾಲಕರಾಗಿದ್ದರು. ಅವರ ಮನೆ ಮಹೇಂದ್ರಗಢ ಬೈಪಾಸ್ನಲ್ಲಿದೆ. ಬೆಳಗ್ಗೆ ಸ್ಕೂಟಿಯಲ್ಲಿ ಕರ್ತವ್ಯಕ್ಕೆ ತೆರಳಿದ್ದರು. ಅಜ್ಜಿ ಸಾವಿತ್ರಿ ದೇವಿಯು ಲೋಹರು ಚೌಕ್ನಲ್ಲಿರುವ ತನ್ನ ಕಿರಿಯ ಮಗನ ಮನೆಗೆ ಹೋಗಬೇಕಾಗಿತ್ತು. ಹೀಗಾಗಿ ಅವರು ಸಹ ಜೊತೆಗೆ ತೆರಳಿದ್ದರು.
ಕಲಿಯಾಣ ತಿರುವಿನಲ್ಲಿ ಬರುವಷ್ಟರಲ್ಲಿ ಎದುರಿನಿಂದ ಬ್ರೆಝ ಕಾರು ಬರುತ್ತಿರುವುದು ಕಾಣಿಸಿದೆ. ಕಾರು ರಾಂಗ್ ಸೈಡ್ ನಿಂದ ಬಂದು ಬಂದು ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ .