ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಣೆ ಮಾಡುವ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ಸುಗಮವನ್ನಾಗಿಸುವ ಉದ್ದೇಶದಿಂದ ಟೋಲ್ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಈ ಬದಲಾವಣೆಯ ಭಾಗವಾಗಿ ಈಗಾಗಲೇ ಜಾರಿಗೊಳಿಸುತ್ತಿರುವ ಫಾಸ್ಟ್ ಟ್ಯಾಗ್ ವ್ಯವಸ್ಥೆಯಲ್ಲಿ ಹೊಸ ನಿಯಮಗಳನ್ನು ಸೋಮವಾರದಿಂದಲೇ ಜಾರಿಗೆ ತಂದಿದೆ.
ಫಾಸ್ಟ್ ಟ್ಯಾಗ್ ಅಲ್ಲೇ ಕಡಿಮೆ ಹಣ ಇರುವುದು, ಪಾವತಿ ಪ್ರಕ್ರಿಯೆಯು ವಿಳಂಬವಾಗುವುದು ಅಥವಾ ಕಪ್ಪು ಪಟ್ಟಿಗೆ ಸೇರಿರುವುದು ಕಂಡುಬಂದಲ್ಲಿ ಹೆಚ್ಚುವರಿ ತಂಡ ವಿಧಿಸಲಾಗುತ್ತದೆ. ವಾಹನ ಟೋಲ್ ಪ್ಲಾಜಾ ತಲುಪುವ 60 ನಿಮಿಷ ಮೊದಲು ಮತ್ತು ಟೋಲ್ ದಾಟಿದ ನಂತರದ 10 ನಿಮಿಷ ಫಾಸ್ಟ್ ಟ್ಯಾಗ್ ನಿಶ್ಮಿಯವಾಗಿದ್ದರೆ ಆಯಾ ಟೋಲ್ ಪ್ಲಾಜಾದಲ್ಲಿನ ವಹಿವಾಟು ತಿರಸ್ಕೃತಗೊಳ್ಳುತ್ತದೆ. ಬಳಿಕ ಈ ಪ್ರಕ್ರಿಯೆಯು ದೋಷದ “ಕೋಡ್ 176” ರರಡಿ ಬರಲಿದೆ.
ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ಇರಬೇಕು ಅಥವಾ ಟೋಲ್ ಪೇಜ್ ಸಮೀಪಿಸುವ ಒಂದು ಗಂಟೆ ಮೊದಲೇ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಫಾಸ್ಟ್ಯಾಗ್ ಖಾತೆಗೆ ಜಮಾ ಮಾಡಬೇಕು. ಇದರ ಬದಲಾಗಿ ಟೋಲ್ ಪೇಜ್ ಹತ್ತಿರ ರಿಚಾರ್ಜ್ ಮಾಡಲು ಮುಂದಾದರೆ ಸಮಸ್ಯೆ ಎದುರಾಗುತ್ತದೆ. ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ ಫಾಸ್ಟ್ಯಾಗ್ ಕಪ್ಪುತ ಸೇರುತ್ತದೆ. ಆಗ ಟೋಲ್ ಪ್ರಮಾಣವನ್ನು ದುಪ್ಪಟ್ಟು ಹೆಚ್ಚಿಸಲಾಗುತ್ತದೆ. ಹೀಗೆ ಹಲವು ಹೊಸ ಟೋಲ್ ನಿಯಮಗಳನ್ನು ಸೋಮವಾರದಿಂದಲೇ ಜಾರಿಗೆ ತರಲಾಗಿ