ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆ ಮೂಲದ ಮಹಿಳೆಯೊಬ್ಬರು ತಮ್ಮ 23 ವರ್ಷದ ದಾಂಪತ್ಯದಲ್ಲಿ 24 ಮಕ್ಕಳಿಗೆ ಜನ್ಮ ನೀಡಿರುವುದಾಗಿ ಹೇಳಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿದ್ದಾರೆ.
ಅಯೋಧ್ಯಾ ವಿಭಾಗದ ಅಂಬೇಡ್ಕರ್ ನಗರದಲ್ಲಿರುವ ಖುಷ್ಬೂ ಪಾಠಕ್ ಅವರೇ 24 ಮಕ್ಕಳ ತಾಯಿ. ಸ್ಥಳೀಯ ಮಾಧ್ಯಮವೊಂದರ ಪತ್ರಕರ್ತನ ಸಂದರ್ಶನದ ವಿಡಿಯೋ ಯೂಟ್ಯೂಬ್ ಚಾನೆಲ್ ಒಂದರಲ್ಲಿ ವೈರಲ್ ಆಗುತ್ತಲೇ, ಈಕೆಯ ಮನೆಯ ಹಾದಿ ತುಳಿದವರು ಅದೆಷ್ಟೋ ಮಂದಿ. ತಮ್ಮ ಯೂಟ್ಯೂಬ್, ಇನ್ಸ್ಟಾಗ್ರಾಮ್ಗಳಲ್ಲಿ ಈ ಮಹಿಳೆಯ ಸಂದರ್ಶನ ಮಾಡಲು ಜನರು ಬರುತ್ತಲೇ ಇದ್ದಾರೆ. ಆದರೆ ಪಾಠಕ್‌ರ ಪಡಿತರ ಚೀಟಿಯಲ್ಲಿ ಕೇವಲ ಇಬ್ಬರು ಮಕ್ಕಳನ್ನು ಮಾತ್ರ ನಮೂದಿಸಿರುವುದು ಪತ್ತೆಯಾಗಿದೆ. ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು “ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಗಳಿಸಲು ಮಹಿಳೆ ಸುಳ್ಳು ಹೇಳುತ್ತಿದ್ದಾಳೆ” ಎಂದು ಕಮೆಂಟ್ ಮಾಡಿದ್ದಾರೆ. “ಅವಳು ಸುಳ್ಳು ಹೇಳುತ್ತಿದ್ದಾಳೆ” ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ನೋಡಲು ತರುಣಿಯಂತೆ ಇರುವ ಈ ಮಹಿಳೆ ಮದುವೆಯಾಗಿ 25 ವರ್ಷಗಳಾಗಿವೆ. 24 ಮಕ್ಕಳನ್ನು ಹಡೆದಿದ್ದಾರೆ.
16 ಮಂದಿ ಗಂಡು ಮಕ್ಕಳು ಹಾಗೂ ಎಂಟು ಮಂದಿ ಹೆಣ್ಣು ಮಕ್ಕಳು ಈಕೆಗೆ. ದೊಡ್ಡ ಮಗನಿಗೆ 18 ವರ್ಷ, ಚಿಕ್ಕವನಿಗೆ ಎರಡು ವರ್ಷ. ಅವಳಿ-ಜವಳಿ ಮಕ್ಕಳೇ ಹೆಚ್ಚಾಗಿ ಹುಟ್ಟಿದ್ದರಿಂದ 24 ಮಕ್ಕಳು ನನಗಿದ್ದಾರೆ ಎಂದಿದ್ದಾಳೆ ಈ ಸುಂದರಿ. ಓರ್ವ ಯೂಟ್ಯೂಬರ್ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ ಹಲವು ಬಾರಿ ಅವಳಿ ಮಕ್ಕಳು ಹುಟ್ಟಿವೆ ಎಂದಿದ್ದಾರೆ. ನಿಮ್ಮನ್ನು ನೋಡಿದರೆ ಇಷ್ಟು ಮಕ್ಕಳ ತಾಯಿ ಎಂದು ಕಾಣಿಸುವುದಿಲ್ಲ, ನಿಮ್ಮ ಬ್ಯೂಟಿ ಸೀಕ್ರೇಟ್ ಏನು ಎಂದು ಕೇಳಿದ್ದಾನೆ. ನಮ್ಮದು ಗ್ರಾಮೀಣ ಪ್ರದೇಶ, ಮನೆ, ಮಕ್ಕಳು, ಕುಟುಂಬ ಜವಾಬ್ದಾರಿ ಅಂತೆಲ್ಲಾ ದಿನಪೂರ್ತಿ ಬಿಜಿ ಇರ್ತೇನೆ. ಅದೇ ವ್ಯಾಯಾಮ ಆಗುತ್ತದೆ. ಮತ್ತೇನೂ ಮಾಡಲ್ಲ ಎಂದಿದ್ದಾರೆ ಖುಷ್ಬೂ. ನಿಮ್ಮ ಪತಿ ಏನು ಮಾಡುತ್ತಾರೆ ಎಂದು ಕೇಳಿದಾಗ ಡ್ರೈವರ್ ಎಂದಿದ್ದಾಳೆ.
ಏನು ಮಾಡಿದರೂ ಯೂಟ್ಯೂಬರ್ಗೆ ಇದು ನಂಬಲು ಸಾಧ್ಯವೇ ಇಲ್ಲದ ಮಾತಾಗುತ್ತದೆ, ಆದರೆ ಇದಾಗಲೇ ಸಾಕಷ್ಟು ವೈರಲ್ ಆಗಿರೋ ವಿಡಿಯೋದಲ್ಲಿಯೂ ಮಹಿಳೆ ಇದನ್ನೇ ಹೇಳುತ್ತಾ ಬಂದಿದ್ದು, ಅಲ್ಲಿರುವವರು ಕೂಡ ಈಕೆಗ 24 ಮಕ್ಕಳು ಎಂದೇ ಹೇಳುತ್ತಿದ್ದಾರೆ. ಆದರೆ ಅಸಲಿಯತ್ತೇ ಬೇರೆ ಇದೆ. ಇವೆಲ್ಲಾ ಪ್ರಚಾರದ ಗಿಮಿಕ್ ಅಷ್ಟೇ. ತಮಾಷೆಗೆಂದು ಖುಷ್ಬೂ ಅವರು ಒಂದು ಕಡೆ ಹೇಳಿದ್ದು ವೈರಲ್ ಆಗುತ್ತಲೇ ಎಲ್ಲರೂ ಈಕೆಯನ್ನು ಹುಡುಕಿ ಬರುತ್ತಿದ್ದಾರೆ. ಒಮ್ಮೆ ಫೇಮಸ್ ಆಗುತ್ತಿದ್ದಂತೆಯೇ ಎಲ್ಲರಿಗೂ ಅದನ್ನೇ ಹೇಳಿದ್ದಾರೆ. ಇವರು 22 ಗಿಡಗಳನ್ನು ನೆಟ್ಟಿದ್ದಾರೆ. ಅವು ಕೂಡ ನನ್ನ ಮಕ್ಕಳು. ನನಗೆ ಅಸಲಿಗೆ ಇರುವುದು ಇಬ್ಬರೇ ಮಕ್ಕಳು. ಇವೆಲ್ಲಾ ತಮಾಷೆಗೆ ಹೇಳ್ತಿರೋದು ಎಂದು ಕೊನೆಗೂ ಗುಟ್ಟನ್ನು ರಟ್ಟು ಮಾಡಿದ್ದಾರೆ. ಆದರೆ ಈ ಗುಟ್ಟು ರಟ್ಟು ಮಾಡಿರುವ ವಿಡಿಯೋ ಅಷ್ಟೆಲ್ಲಾ ವೈರಲ್ ಆಗದ ಕಾರಣ, 24 ಮಕ್ಕಳ ತಾಯಿಯನ್ನು ಹುಡುಕಿ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಖಷ್ಬೂ ಕೂಡ ಅವರ ಬಳಿ ತಮ್ಮದೇ ಆದ ಸ್ಟೈಲ್ನಲ್ಲಿ ಅದನ್ನೇ ನಿಜ ಎಂದು ಇಂದಿಗೂ ನಂಬಿಸುತ್ತಿದ್ದಾರೆ.