ಇಂದು ಮಾರ್ಟಿನ್ ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಎ.ಪಿ. ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಸಿನಿಮಾಕ್ಕೆ ಎಲ್ಲೆಡೆ ಬೆಸ್ಟ್ ಪ್ರತಿಕ್ರಿಯೆ ಸಿಗ್ತಿದೆ. ಈ ಸಿನಿಮಾಕ್ಕೆ ಧ್ರುವ ಸರ್ಜಾ ನಾಯಕರಾಗಿದ್ದಾರೆ. ಇನ್ನು ಪ್ರಾದೇಶಿಕ ಸೆನ್ಸಾರ್‌ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿತ್ತು. ಕರ್ನಾಟಕದಲ್ಲಿ ಇನ್ನೂ ಮಾರ್ಟಿನ್ ಬಗ್ಗೆ ವಿಮರ್ಶೆ ಹೊರಬೀಳಬೇಕಿದೆ. ಆದರೆ ಆಂಧ್ರಪ್ರದೇಶದಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಅಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ತೆಲುಗು ವೀಕ್ಷಕರು ಹೇಳಿದ್ದೇನು? ‘ಮಾರ್ಟಿನ್’ ಸಿನಿಮಾ ಆಕ್ಷನ್ ಸಖತ್ ಆಗಿದೆ. ಹಾಲಿವುಡ್ ರೇಂಜ್‌ನಲ್ಲಿ ಸಖತ್ ಆಗಿ ಮಾಡಿದ್ದಾರೆ. ಒಳ್ಳೆಯ ಮೆಸೇಜ್ ಕೊಟ್ಟಿದ್ದಾರೆ ಸಿಂಪಲ್ ಟ್ವಿಸ್ಟ್ ಇದೆ ಭಾರತದಲ್ಲಿ ಬಂದ ಉತ್ತಮ ಸಿನಿಮಾವಿದು ಅವರೇನು ಮನುಷ್ಯನಾ? ಚೈನಾ ಗೋಡೆ ಥರ ಧ್ರುವ ಸರ್ಜಾ ಇದ್ದಾರೆ. ಈ ಚಿತ್ರದ ಮುಂದೆ ಕೆಜಿಎಫ್ ಸಣ್ಣದಾಗಿ ಕಾಣುತ್ತದೆ, ಧ್ರುವ ಸರ್ಜಾ ಮಾತ್ರ ಡೈನೋಸರ್ ಥರ ಇದ್ದಾರೆ ಈ ಸಿನಿಮಾದ ಕಾನ್ಸೆಪ್ಟ್ ಸಖತ್ ಆಗಿದೆ ಈ ಥರದ ಕಾನ್ಸೆಪ್ಟ್ ಎಲ್ಲಿಂದ ಬರತ್ತೋ ಏನೋ! ‘ದೇವರ’ ಸಿನಿಮಾಕ್ಕೂ ಮೀರಿದ ವಿಷಯಗಳು ಇಲ್ಲಿವೆ ನೂರು ದಿನ ಈ ಸಿನಿಮಾ ಓಡತ್ತೆ KGF ಸಿನಿಮಾ ನಂತರ ಈ ಸಿನಿಮಾನೇ ಹಿಟ್ ಆಗಲಿದೆ ಇದು ಪಕ್ಕಾ ಮಾಸ್ ಸಿನಿಮಾ, ವೀಕ್ಷಕರಿಗೆ ಮೋಸ ಇಲ್ಲ. ಒಂದು ಸಲ ಸಿನಿಮಾ ನೋಡಬಹುದು, ಮತ್ತೆ ನೋಡಲು ಬೇಸರ ಆಗಬಹುದು ಎಂದು ನೆಗೆಟಿವ್ ವಿಷಯವನ್ನು ಹೇಳಿದ್ದಾರೆ. ಮೊದಲ ಭಾಗ ಚೆನ್ನಾಗಿದೆ, ಧ್ರುವ ಸರ್ಜಾ ಚೆನ್ನಾಗಿ ನಟಿಸಿದ್ದಾರೆ ಚೆನ್ನಾಗಿದೆ ನೋಡೋ ಥರ ಸಿನಿಮಾ ಇದೆ ಆಕ್ಷನ್ ಸಖತ್ ಆಗಿದೆ ದಸರಾ ಹಬ್ಬದ ಟೈಮ್‌ನಲ್ಲಿ ದರ್ಬಾರ್ ಮಾಡಿದೆ ಕೊಟ್ಟಿರೋ ದುಡ್ಡಿಗೆ ಮೋಸ ಇಲ್ಲ ಈ ಸಿನಿಮಾ ಜಾತ್ರೆ ಥರ ಇಲ್ಲ, ಚೆನ್ನಾಗಿದೆ ಎಂದು ಕನ್ನಡ ಅಭಿಮಾನಿಗಳು ಹೇಳಿದ್ದಾರೆ. ಒಟ್ಟು 10 ವಿಭಿನ್ನ ಶೇಡ್‌ಗಳಲ್ಲಿ ಧ್ರುವ ಸರ್ಜಾ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲೂ ಅವರದ್ದೇ ಆದ ಅನೇಕ ಶೇಡ್‌ಗಳಿವೆ’ ಎಂದು ಹೇಳಿದ್ದಾರೆ. ಅದ್ದೂರಿ ಮೇಕಿಂಗ್ ಭಾವನಾತ್ಮಕ ವಿಷಯವೂ ಇದೆ. ಮಾರ್ಟಿನ್ ಸಿನಿಮಾದಲ್ಲಿ ಚಿತ್ರಕಥೆಯೇ ವಿಶೇಷವಾಗಿದೆ. ಸಾಂಗ್, ದೃಶ್ಯಗಳೆಲ್ಲವೂ ರೋಮಾಂಚನವಾಗಿವೆ. ದೃಶ್ಯಕಾವ್ಯ’ ಎಂದಿದ್ದಾರೆ ಎಪಿ ಅರ್ಜುನ್. ವೈಭವಿ ಶಾಂಡಿಲ್ಯ ಅವರು ಈ ಸಿನಿಮಾ ನಾಯಕಿ. ಉದಯ್ ಕೆ ಮೆಹ್ತಾ ಅವರು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಅನ್ವೇಷಿ ಜೈನ್, ಸುಕೃತಾ ವಾಗ್ಲೆ, ಅಚ್ಯುತ್ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
