ಬೆಂಗಳೂರು: ದೆಹಲಿಯ ಖಾಸಗಿ ಸಂಸ್ಥೆಯಿಂದ ನಗರದ ಟ್ರಾಫಿಕ್ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿ ಬಿಬಿಎಂಪಿಗೆ ಕಾರ್ಯ ಸಾದ್ಯತೆ ವರದಿ ಸಲ್ಲಿಸಲಾಗಿದೆ. ಸುಮಾರು 45 ಸಾವಿರ ಕೋಟಿ ವೆಚ್ಚದ ಡಿಪಿಆರ್ ಸಿದ್ಧತೆ ಆಗಿದ್ದು 2024-25 ರ ಬಜೆಟ್‌ನಲ್ಲಿ ಸಿಎಂ ಘೋಷಣೆ ಮಾಡಿರೋ ಯೋಜನೆಗಳು, ಡಿಸಿಎಂ ಅಗಾಗ್ಗೆ ಪ್ರಕಟಿಸಿದ ಯೋಜನೆಗಳು, ಪಾಲಿಕೆಯಿಂದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರೋ ಯೋಜನೆ ಇವುಗಳನ್ನೆಲ್ಲ ಕ್ರೋಡೀಕರಿಸಿ ಯೋಜನೆಗಳ ವೆಚ್ಚ, ಅನುಷ್ಟಾನದ ಮಾರ್ಗ, ಪರಿಸರದ ಮೇಲಿನ ಪರಿಣಾಮ ಒಳಗೊಂಡ ವರದಿ ಆಗಿರುತ್ತದೆ.
ಬೆಂಗಳೂರಿನ ಸಮಗ್ರ ಸಂಚಾರ ನಿರ್ವಹಣೆ ಯೋಜನೆಯ ಡಿಪಿಅರ್ ಇದಾಗಿದ್ದು ಹೊಸ ಡಿಪಿಆರ್‌ನಲ್ಲಿ ಏನೆಲ್ಲ ಇದೆ ಅಂತ ನೋಡೋದಾದ್ರೆ, ಹಾಲಿ ಇರೋ ರಸ್ತೆ, ಜಂಕ್ಷನ್ ಇಂಟರ್ ಸೆಕ್ಷನ್ ಸಂಚಾರಕ್ಕೆ ಹಲವು ಸಲಹೆಗಳು ಇದ್ದು ಜೊತೆಗೆ ಮೈಸೂರು ರಸ್ತೆ, ತುಮಕೂರು ರಸ್ತೆ, ಹಳೆ ಮದ್ರಾಸ್ ರಸ್ತೆ, ಸೇರಿದಂತೆ 5 ರಸ್ತೆಗಳ ಮರು ವಿನ್ಯಾಸ ಮಾಡಲಾಗಿದೆ. ಅಂಡರ್ ಪಾಸ್, ಮೇಲ್ಸೆತ್ತುವೆ, ಸಂಪರ್ಕ ರಸ್ತೆಗಳನ್ನು ಮಾಡುವುದು.12 ಎಲಿವೇಟೆಡ್ ಕಾರಿಡಾರ್, 2 ಕಿರು ಪ್ಲೇ ಓವರ್, ಎರಡು ಡಬಲ್ ಡೆಕ್ಕರ್ ಕಾರಿಡಾರ್ ಮತ್ತು ಎರಡು ಹೊಸ ಸುರಂಗ ರಸ್ತೆ ನಿರ್ಮಾಣ ಮಾಡುವುದು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಮೆಟ್ರೋ ರೈಲು ಯೋಜನೆ ಗಳನ್ನು ಜಾರಿಗೆ ತರುವುದು ಹೀಗೆ ಹತ್ತು ಹಲವು ಯೋಜನೆಗಳ ಅನುಷ್ಠಾನದ ವರದಿ ಬಿಬಿಎಂಪಿ ಸಿದ್ಧಪಡಿಸಿದೆ.