ಚಿತ್ರದುರ್ಗ : ಚಂದ್ರವಳ್ಳಿಯಲ್ಲಿರುವ ಮಯೂರಶರ್ಮನ ಶಾಸನವನ್ನು 1928 ರಲ್ಲಿ ಡಾ.ಎಂ.ಎಚ್.ಕೃಷ್ಣ ಓದಿರುವ ಮೂಲ ಚರಿತ್ರೆ ಸತ್ಯವಾಗಿದೆ. ಯಾವುದೇ ಗೊಂದಲ ತಪ್ಪು ಇಲ್ಲ. ಚಿತ್ರದುರ್ಗದ ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪನವರು 1984 ರಲ್ಲಿ ಮಯೂರ ಶರ್ಮನ ಶಾಸನವನ್ನು ಮರು ಪರಿಶೀಲನೆ ನಡೆಸಿರುವುದು ಊಹಾ ಪಾಠವಾಗಿದ್ದು, ಎಂ.ಎಚ್.ಕೃಷ್ಣರವರ ಪಾಠಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಮಯೂರ ಶರ್ಮನ ಐತಿಹಾಸಿಕ ಸಂಗತಿಗಳನ್ನು ಕೈಬಿಟ್ಟಿದ್ದಾರೆ. ಇದರಿಂದ ಮಯೂರ ಶರ್ಮನ ಇತಿಹಾಸ ಕರ್ನಾಟಕದ ಪ್ರಾರಂಭದ ರಾಜಕೀಯ ಚರಿತ್ರೆಗೆ ಧಕ್ಕೆಯುಂಟಾಗಿದೆ ಎಂದು ಇತಿಹಾಸ ಸಂಶೋಧಕ ಡಾ.ಎನ್.ಎಸ್.ಮಹಂತೇಶ್ ಆಪಾದಿಸಿದರು.
ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಾ.ಎಂ.ಎಚ್.ಕೃಷ್ಣರವರು ಚಂದ್ರವಳ್ಳಿ ಶಾಸನವನ್ನು ಪತ್ತೆ ಹಚ್ಚಿದಾಗ ಹುಲ್ಲೂರು ಶ್ರೀನಿವಾಸ ಜೋಯಿಸರು ಸಹಾಯ ಮಾಡುತ್ತಾರೆ. ಮೂರು ಸಾಲಿನ ಈ ಶಾಸನ ಕ್ರಿ.ಶ.258 ಕ್ಕೆ ಸೇರಿದ್ದು, ಮೂಲ ಶಾಸನ ಚರಿತ್ರೆ ಕಟ್ಟಲು ಇತಿಹಾಸ ಬೇಕು. ಮೈಸೂರಿನಿಂದ ಇಲ್ಲಿಗೆ ಬಂದು ಚಂದ್ರವಳ್ಳಿಯಲ್ಲಿ ಕೆಲಸ ಮಾಡುತ್ತಾರೆ. ವಿಶೇಷವಾದ ಈ ಶಾಸನದ ಬಗ್ಗೆ ಯಾವ ವಿದ್ವಾಂಸರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ. ಆದರೆ 1984 ರಲ್ಲಿ ಇದೆ ಶಾಸನವನ್ನು ಮರು ಪರಿಶೀಲಿಸಿದ ಡಾ.ಬಿ.ರಾಜಶೇಖರಪ್ಪನವರು ಪದಗಳನ್ನು ಬದಲಿಸಿ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ. ಎಂದರು.
ಕರ್ನಾಟಕ ರಾಜಕೀಯ ಚರಿತ್ರೆಗೆ ಹಾಗೂ ಕದಂಬರ ಚರಿತ್ರೆಗೆ ಅನೇಕ ಹೊಸ ಸಂಗತಿಗಳು ಸೇರ್ಪಡೆಗೊಂಡು ಆ ಮೂಲಕ ಇಂತಹ ಅಮೂಲ್ಯ ಶಾಸನ ಪ್ರಕಟಿಸಿದ ಡಾ.ಎಂ.ಎಚ್.ಕೃಷ್ಣ ಅವರಿಗೆ ಹಿರಿಮೆ, ಗರಿಮೆ ಪ್ರಾಪ್ತವಾದವು. ಈ ಶಾಸನ ಪಾಠದ ಪಡಿಯಚ್ಚನ್ನು ಅವಲೋಕಿಸಿದ ಕೆಲವು ವಿದ್ವಾಂಸರು ಅದರಲ್ಲಿನ ಹಲವು ಸಂಗತಿಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೂ ಇಡಿ ಶಾಸನ ಪಾಠವನ್ನು ಯಾರು ಬದಲಿಸಲಿಲ್ಲ. ಚಿತ್ರದುರ್ಗದ ಸ್ಥಳೀಯ ಶಾಸನ ತಜ್ಞರಾದ ಡಾ.ಬಿ.ರಾಜಶೇಖರಪ್ಪನವರು ಚಂದ್ರವಳ್ಳಿ ಶಾಸನವನ್ನು ಪುನರ್ ಪರಿಶೀಲನೆ ಮಾಡುವುದರ ಮೂಲಕ ಇಡಿ ಶಾಸನ ಪಾಠವನ್ನು ಬದಲಿಸಿ ಹೊಸ ವಿವರಣೆ ನೀಡಿದರೆ ವಿನಃ ಶಾಸನ ಪಾಠದ ಪಡಿಯಚ್ಚನ್ನು ತೆಗೆಯಲಿಲ್ಲ. ಅಕ್ಷರ ಸಂಸ್ಕøತಿಯನ್ನು ಮೊಟ್ಟ ಮೊದಲು ಚಿತ್ರದುರ್ಗದಲ್ಲಿ ಕೊಟ್ಟಿದ್ದು, ಮಯೂರ ಶರ್ಮ. ಅದಕ್ಕಾಗಿ ಅಧ್ಯಯನ ಶಾಸನಕ್ಕೆ ನ್ಯಾಯ ಸಿಗಬೇಕೆಂದು ಒತ್ತಾಯಿಸಿದರು.

































