ಬೆಂಗಳೂರು: ಧರ್ಮಸ್ಥಳ ತಲೆಬುರುಡೆ ಕೇಸ್ ತನಿಖೆ ಮುಂದುವರಿದಿದೆ. ತಲೆ ಬುರುಡೆ ರಹಸ್ಯ ಹುಡುಕುತ್ತಿರುವ ಎಸ್ಐಟಿ ತಂಡ, ಈಗಾಗಲೇ ಹಲವರ ವಿಚಾರಣೆ ಮಾಡಿದೆ. ಬುರುಡೆ ಮ್ಯಾನ್ ಚಿನ್ನಯ್ಯ ಈಗಾಗಲೇ ಎಸ್ಐಟಿ ವಿಚಾರಣೆ ಎದುರಿಸಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಮತ್ತೊಂದೆಡೆ ಧರ್ಮಸ್ಥಳ ತಲೆಬುರುಡೆ ಕೇಸ್ ಬಗ್ಗೆ ಎಐ ವಿಡಿಯೋ ಮಾಡಿ, ಹಲವರ ದಿಕ್ಕು ತಪ್ಪಿಸಿದ್ದ ಯೂಟ್ಯೂಬರ್ ಸಮೀರ್ ಎಂಡಿಯನ್ನೂ ಬೆಳ್ತಂಗಡಿ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದೀಗ ಇದೇ ಸಮೀರ್ ಎಂಡಿ ಮತ್ತೊಂದು ವಿಡಿಯೋ ಮಾಡಿದ್ದಾನೆ. ಇಂದು ನನಗೆ ಇರೋದಕ್ಕೆ ಮನೆ ಇಲ್ಲ ಎಂದಿರುವ ಸಮೀರ್, ಪೊಲೀಸ್ ವಿಚಾರಣೆ ಬಳಿಕ ನನಗೆ ಬಾಡಿಗೆ ಮನೆ ಸಿಗ್ತಿಲ್ಲ ಅಂತ ಅಳಲು ತೋಡಿಕೊಂಡಿದ್ದಾನೆ. ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆಗೆ ಒಳಗಾಗಿರುವ ಯೂಟ್ಯೂಬರ್ ಸಮೀರ್ ಎಂಡಿ, ವಿಚಾರಣೆ ಬಳಿಕ ಮತ್ತೊಂದು ವಿಡಿಯೋ ಮಾಡಿದ್ದಾನೆ. ಈ ಬಾರಿ ಸ್ಟುಡಿಯೋ ಬದಲು ಕಾರಿನಲ್ಲಿ ಕುಳಿತು ಸಮೀರ್ ವಿಡಿಯೋ ಮಾಡಿದ್ದಾನೆ. ಧರ್ಮಸ್ಥಳ ತಲೆ ಬುರುಡೆ ಕೇಸ್, ಪೊಲೀಸ್ ವಿಚಾರಣೆ, ಸುಜಾತಾ ಭಟ್ ಕೇಸ್, ಬಾಡಿಗೆ ಮನೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಮೀರ್ ಮಾತನಾಡಿದ್ದಾನೆ.
ನನಗೆ ವಿದೇಶದಿಂದ ಫಂಡ್ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ಆದ್ರೆ ನನಗೆ ಯಾವುದೇ ಫಂಡ್ ಬಂದಿಲ್ಲ ಎಂದಿದ್ದಾನೆ. ಹಣ ತಗೊಂಡಿದ್ರೆ ತನಿಖೆಯಿಂದ ಎಲ್ಲಾ ಹೊರಗೆ ಬರ್ತಿತ್ತು. ನಾನು ಪೊಲೀಸರಿಗೆ ಎಲ್ಲಾ ಬ್ಯಾಂಕ್ ದಾಖಲೆ ನೀಡಿದ್ದೇನೆ. ಪೊಲೀಸರು ತನಿಖೆ ಮಾಡಲಿ, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದಾನೆ. ಇನ್ನು ನನ್ನ ಮೇಲೆ ಸುಳ್ಳು ಆರೋಪ ಮಾಡುವವರನ್ನು ಯಾರೂ ಪ್ರಶ್ನೆ ಮಾಡಲ್ಲ ಎಂದು ಸಮೀರ್ ಅಲವತ್ತುಕೊಂಡಿದ್ದಾನೆ.. ಈ ನಡುವೆ ಸುಜಾತಾ ಭಟ್ ಬಗ್ಗೆ ವಿಡಿಯೋದಲ್ಲಿ ಸಮೀರ್ ಮತನಾಡಿದ್ದಾನೆ.
ಆ ತಾಯಿಯ ಕಣ್ಣೀರು ನೋಡಿ ವಿಡಿಯೋ ಮಾಡಿದ್ದೆ. ಸುಜಾತಾ ಭಟ್ ಅವರ ಇಂಟರ್ವ್ಯೂ ನೋಡಿ, ಕಣ್ಣೀರು ನೋಡಿ ಅದರ ಬಗ್ಗೆ ವಿಡಿಯೋ ಮಾಡಿದ್ದೆ. ಆದರೆ ಈಗ ಆ ಕಣ್ಣೀರೇ ಸುಳ್ಳು ಅಂದ್ರೆ ನಾನು ಏನು ಮಾಡಲಿ ಎಂದು ಸಮೀರ್ ಪ್ರಶ್ನಿಸಿದ್ದಾನೆ. ನನ್ನ ವಿಡಿಯೋ ಸುಳ್ಳು ಎಂದು ಹೇಳುತ್ತಿದ್ದಾರೆ. ಪೊಲೀಸರ ಯುಡಿಆರ್ ರಿಪೋರ್ಟ್ ಸುಳ್ಳಾ? ಸೌಜನ್ಯಾ, ಪದ್ಮಾಲತಾರನ್ನು ಸಾಯಿಸಿದ್ದು ಯಾರು? ಎಂದು ಸಮೀರ್ ಪ್ರಶ್ನಿಸಿದ್ದಾನೆ. ಯಾವಾಗಲೂ ಸ್ಟುಡಿಯೋದಲ್ಲಿ ಕ್ಯಾಮರಾ ಮುಂದೆ ಕೂತ್ಕೊಂಡು ವಿಡಿಯೋ ಮಾಡ್ತಿದ್ದೆ. ಆದರೆ ಇವತ್ತು ಕಾರಲ್ಲಿ ಕೂತ್ಕೊಂಡು ವಿಡಿಯೋ ಮಾಡ್ತಿದ್ದೇನೆ ಎಂದು ಸಮೀರ್ ಹೇಳಿದ್ದಾನೆ. ಪ್ರಾಮಾಣಿಕವಾಗಿ ನಾನು ಹೇಳ್ತಿದ್ದೇನೆ.
ಇವತ್ತು ನನಗೆ ಮನೆ ಇಲ್ಲ ಎಂದು ಸಮೀರ್ ಹೇಳಿಕೊಂಡಿದ್ದಾನೆ. ಯಾವುದೋ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಇದ್ವಿ. ಆದ್ರೆ ಪೊಲೀಸರು ತನಿಖೆಗೆ ಎಂದು ಮನೆಗೆ ಬಂದರು. ನಂತರ ಮನೆಯ ಓವರ್ ನಮ್ಮನ್ನು ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇವತ್ತು ಸಮೀರ್ ಎಂಡಿ ಅಂದರೆ ಯಾರೂ ಮನೆ ಕೊಡ್ತಿಲ್ಲ ಎಂದು ಬೇಸರ ತೋಡಿಕೊಂಡಿದ್ದಾನೆ. ವಸತಿ ಶಾಲೆಯಲ್ಲಿ ಉಪ್ಪಿಟ್ಟು ತಿಂದು 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ