ಬೆಂಗಳೂರು: ಸಿಕ್ಕಿಂನಲ್ಲಿ ಅರೆಸ್ಟ್ ಆದ ಚಿತ್ರದುರ್ಗ ಶಾಸಕ ಕೆಸಿ ವಿರೇಂದ್ರ ಪಪ್ಪಿಯನ್ನು ಇಡಿ ಅಧಿಕಾರಿಗಳು ಬೆಂಗಳೂರಿಗೆ ಕರೆತಂದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ಬಳಿಕ ಶಾಂತಿನಗರ ಇಡಿ ಕಚೇರಿಗೆ ಕರೆ ತಂದಿದ್ದಾರೆ.!
ಅಕ್ರಮ ಹಣ ವರ್ಗಾವಣೆ, ಅಕ್ರಮ ಆಸ್ತಿಗಳಿಗೆ ಆರೋಪದಡಿ ಇಡಿ ಅಧಿಕಾರಿಗಳು ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ಬಂಧಿಸಿದ್ದಾರೆ. ಸಿಕ್ಕಿಂನಲ್ಲಿ ಕಾಂಗ್ರೆಸ್ ಶಾಸಕನ ವಶಕ್ಕೆ ಪಡೆದ ಇಡೀ ಅಧಿಕಾರಿಗಳು ಬೆಂಗಳೂರಿಗೆ ಕರೆ ತಂದಿದ್ದಾರೆ. ಬೆಂಗಳೂರಿನ ಶಾಂತಿನಗರ ಇಡಿ ಕಚೇರಿಯಲ್ಲಿ ಚಿತ್ರದುರ್ಗ ಶಾಸಕ ಕೆಸಿ ವೀರೇಂದ್ದ ಪಪ್ಪಿ ವಿಚಾರಣೆ ನಡೆಯಲಿದೆ.!