ಹೆಸರೇ ತಿಳಿಸುವಂತೆ ಗಿಡದ ಮೈತುಂಬಾ ಮುಳ್ಳುಗಳನ್ನು ಹೊಂದಿರುವ ಪೊದೆಯಾಗಿ ಬೆಳೆಯುವ ಅಪರೂಪದ ಗಿಡ. ಈ ಗಿಡ ಬೆಳೆದಂತೆ ಎತ್ತರಕೆ ಹೋಗಿ ಬಾಗಿ ಬಿಡುತ್ತದೆ. ಅಂದರೆ ಅತ್ತ ಮರವೂ ಅಲ್ಲ ಇತ್ತ ಬಳ್ಳಿಯೂ ಅಲ್ಲದ ಈ ಸಸ್ಯ ಸಾಮಾನ್ಯವಾಗಿ ಬೇಸಿಗಯ ದಿನಗಳಲ್ಲಿ ಮಾರ್ಚ್ ನಿಂದ ಮೇ ತಿಂಗಳವರೆಗೆ ಗಿಡದ ತುಂಬಾ ಮುತ್ತಿನಂತಹ ಅಪರೂಪದ ಮತ್ತು ರುಚಿಯಾದ ಹಣ್ಣು ಕಾಣಸಿಗುವುದು. ಇದರ ಹಣ್ಣು ಬಲು ರುಚಿಕರ. ಹಿಂದಿನ ದಿನಗಳಲ್ಲಿ ಎಲ್ಲಂದರಲ್ಲಿ ಕಾಣಸಿಗುತ್ತಿದ್ದ ಈ ಸಸ್ಯ ಈಗ ಮರೆಯಾಗಿದೆ. ಶಾಲಾ ಕಾಲೇಜುಗಳ ಬಳಿ ಇಂತಹ ಹಣ್ಣನ್ನು ಮಾರುತ್ತಿದ್ದರು.ಇಂತಹ ಹಣ್ಣುಗಳನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರಕುತಿತ್ತು.
ಈ ಗಿಡದ ಹಣ್ಣು ಮಾತ್ರವಲ್ಲದೆ ಗಿಡದ ತೊಗಟೆಯೂ ಕೂಡ ಔಷದೀಯ ಗುಣವನ್ನು ಹೊಂದಿದೆ. ಹಿಂದಿನ ಕಾಲದ ಆರ್ಯುವೇದ ಪಂಡಿತರುಗಳು ತಮ್ಮ ಪಾರಂಪರಿಕ ಔಷಧಿಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಿದ್ದರು. ಆರ್ಯುವೇದದಲ್ಲೂ ಇದರ ಉಪಯೋಗವಿದೆ.
ಗಿಡದ ತೊಗಟೆಯ ಕಷಾಯ ಅಥವಾ ಗಂಜಿ ಮಾಡಿ ಕುಡಿದರೆ ಬಾಯಿ ಹುಣ್ಣು ನಿವಾರಣೆಯಾಗುತ್ತದೆ.
ಬೀಜವನ್ನು ಚೆನ್ನಾಗಿ ತೊಳೆದು ನೀರಿನೊಂದಿಗೆ ಚೆನ್ನಾಗಿ ರುಬ್ಬಿ ತೆಳುವಾದ ಕಾಟನ್ ಬಟ್ಟೆಯಲ್ಲಿ ಹಾಕಿ ಫಿಲ್ಟರ್‌ಮಾಡಿ ಬೆಲ್ಲ ಸೆರಿಸಿ ಸೇವಿಸಿದರೆ ದೇಹಕ್ಕೆ ತಂಪು ನೀಡುತ್ತದೆ.
ತೊಗಟೆಯ ಕಷಾಯ ಉದರ ಸಂಬಂಧಿ ರೋಗ, ಮಲಬದ್ಧತೆಯನ್ನೂ ದೂರ ಮಾಡುತ್ತದೆ.
ಇದರ ಹಣ್ಣಿನ ಸೇವನೆಯಿಂದ ದೇಹದಲ್ಲಿ ಪಿತ್ತದಂಶ ಕಡಿಮೆಯಗಿ ಪಿತ್ತದಿಂದ ಬರುವ ನೋವು ವಾಸಿ ಆಗುವುದು.
ತೊಗಟೆಯಿಂದ ಗಂಜಿ ಮಾಡಿ ಕುಡಿದರೆ ಪಿತ್ತ ಬಾಧೆ ಕಡಿಮೆಯಾಗುತ್ತದೆ.
ತೊಗಟೆ ಜಜ್ಜಿ ನೀರಲ್ಲಿ ಹಾಕಿ ಸ್ನಾನ ಮಾಡಿದರೆ ಮೈತುರಿಕೆ ಕಡಿಮೆಯಾಗುತ್ತದೆ.
ಇದರ ಎಳೆಯ ಕಾಂಡವನ್ನು ಜಜ್ಜಿ ಕೆಲ ಸಮಯ ನೀರಿನಲ್ಲಿ ಕಿವುಚಿ ನೆನೆಯಿಸಿಟ್ಟು ನೀರನ್ನು ಕುಡಿದರೆ ದೇಹದ ಉಷ್ಣ ಕಡಿಮೆಯಾಗುತ್ತದೆ.
ಕೊಟ್ಟೆ ಹಣ್ಣನ್ನು ಸೇವಿಸುವುದರಿಂದ ದೇಹದ ಉಷ್ಣಂಶ ಕಡಿಮೆಯಾಗುತ್ತದೆ.
ಹೀಗೆ ಹಲವಾರು ಉಪಯೋಗ ಇರುವ ಇಂತಹ ಹಲವಾರು ಗಿಡ ಮರಗಳು ನಮ್ಮ ಅಕ್ಕ ಪಕ್ಕದಲ್ಲಿ ಅಲ್ಲೊಂದು ಇಲ್ಲೊಂದು ಕಾಣಸಿಕ್ಕರೂ ಅಳಿವಿನಂಚಿನಲ್ಲಿ ಇದೆ. ಇವುಗಳನ್ನು ಉಳಿಸುವ ಕೆಲಸ ಆಗಬೇಕಾಗಿದೆ.
ಪರಿಚಯವಿಲ್ಲದ ಕಾಡು ಹಣ್ಣುಗಳನ್ನು ಸೇವಿಸುವ ಮೊದಲು ತಿಳಿದಿರುವವರ ಬಳಿ ಖಾತರಿಪಡಿಸಿಕೊಳ್ಳಿ